ನನಗೆ ವಯಸ್ಸಾಗಿದೆ.. ಯುವಕರಿಗೆ ಮೊದಲು ಲಸಿಕೆ ನೀಡಿ : ಮಲ್ಲಿಕಾರ್ಜುನ್ ಖರ್ಗೆ
ನವದೆಹಲಿ : ನನಗೆ ವಯಸ್ಸಾಗಿದೆ.. ಬಹಳ ಅಂದ್ರೆ ನಾನು 10-15 ವರ್ಷ ಬದುಕಬಲ್ಲೆನು. ಹೀಗಾಗಿ ನನಗಿಂತಲೂ ಯುವಕರಿಗೆ ಕೋವಿಡ್ ಲಸಿಕೆ ನೀಡಿ ಅಂತಾ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ಇಂದಿನಿಂದ ದೇಶದಾದ್ಯಂತ ಮೂರನೇ ಹಂತದ ಕೋವಿಡ್ ಲಸಿಕೆ ವಿತರಣೆ ಆರಂಭವಾಗಿದೆ. ಇದರಲ್ಲಿ 60 ವರ್ಷ ಮೇಲ್ಪಟ್ಟ ನಾಗರೀಕರಿಗೆ ಹಾಗೂ 45 ರಿಂದ 49 ವರ್ಷದವರೆಗಿನ ಸೋಂಕಿತರಿಗೆ ಲಸಿಕೆ ನೀಡಲಾಗುತ್ತಿದೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ನನಗೆ ಈಗ 70 ವರ್ಷ ವಯಸ್ಸಾಗಿದೆ.
ನನಗಿಂತಲೂ ನೀವು ಯುವಕರಿಗೆ ಕೋವಿಡ್ ಲಸಿಕೆ ನೀಡಬೇಕು. ನಾನು ಬಹಳ ಅಂದರೆ 10-15 ವರ್ಷ ಬದುಕಬಲ್ಲೆನು.
ಆದರೆ ಯುವಕರು ದೀರ್ಘಾಯುಷ್ಯ ನಡೆಸಬೇಕಾಗಿದೆ. ಈ ಕಾರಣಕ್ಕಾಗಿ ಮೊದಲ ಆದ್ಯತೆ ಯುವಕರಿಗೆನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ನಾಯಕರು ಕೊರೋನವೈರಸ್ ಲಸಿಕೆಯ ಮೊದಲ ಡೋಸ್ ಪಡೆದರು.