IMDB ರೇಟಿಂಗ್ಸ್ ಪ್ರಕಾರ 2021 ರ ಭಾರತದ ಟಾಪ್ 10 ಸಿನಿಮಾಗಳಿವು..!
2021 ಮುಗಿಯುತ್ತಾ ಬಂತು.. 2022 ರ ಹೊಸ ವರ್ಷ ಸ್ವಾಗತಿಸಲು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ.. ಈ ವರ್ಷ ಕಲರ್ ಫುಲ್ ಆಗಿರಲಿ ಅಂತ ಸಿನಿಮಾರಂಗವೂ ಕೂಡ ನಿರೀಕ್ಷೆಯಲ್ಲಿದೆ.. ಆದ್ರೆ ಹೊಸ ವರ್ಷ ಸ್ವಾಗತಕ್ಕೂ ಮುನ್ನ 2021 ರ ಭಾರತೀಯ ಸಿನಿಮಾಗಳ ಬಗ್ಗೆ ತಿಳಿಯಲೇ ಬೇಕು ಯಾವ ಸಿನಿಮಾಗಳು ಹಿಟ್ ಆಗಿವೆ.. ಯಾವ ಸಿನಿಮಾಗಳು ಜನರಿಗೆ ತತುಂಬಾ ಹಿಡಿಸಿದೆ.. IMDB ರೇಟಿಂಗ್ಸ್ ಪ್ರಕಾರ ಯಾವ ಸಿನಿಮಾ ಟಾಪ್ ನಲ್ಲಿದೆ ಅನ್ನೋದನ್ನ ನೋಡುವ ಸಮಯ..
ಟಾಪ್ 10 ಸಿನಿಮಾಗಳು….
ಜೈ ಭೀಮ್ – IMDb Rating – 9.5
ತಮಿಳು ಸಿನಿಮಾ – ಸೂರ್ಯ ನಟನೆ
ಈ ವರ್ಷ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ಸೂರ್ಯ ಅವರ ಜೈ ಭೀಮ್ ಸಿನಿಮಾ , ಸಖತ್ ಹಿಟ್ ಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.. ಸಾಕಷ್ಟು ವಿವಾದ ವಿರೋಧಗಳ ನಡುವೆಯೂ ಸೂಪರ್ ಹಿಟ್ ಆಗಿ ಪ್ರೇಕ್ಷರನ್ನ ಅದ್ರಲ್ಲೂ ಯುವ ಜನರನ್ನ ಪ್ರೇರೇಪಿಸುವಲ್ಲಿ ಯಸಸ್ವಿಯಾಯ್ತು.. ಸತ್ಯ ಘಟನೆಯ ಆಧಾರಿತ ಸಿನಿಮಾಗೆ IMDB 9.5 ರೇಟಿಂಗ್ ಕೂಡ ನೀಡಿತ್ತು.. ಈ ಮೂಲಕ ಸಿನಿಮಾ ಹಾಲಿವುಡ್ ಸಿನಿಮಾಗಳನ್ನ ಮೀರಿ ಯಶಸ್ಸು ಸಾಧಿಸಿತ್ತು..
ಸರ್ದಾರ್ ಉದ್ಧಮ್ – IMDb Rating – 8.8
ಹಿಂದಿ ಸಿನಿಮಾ – ವಿಕ್ಕಿ ಕೌಶಾಲ್ ನಟನೆ
ವಿಕ್ಕಿ ಕೌಶಾಲ್ ಅಭಿನಯದ ಉಧಮ್ ಸಿಂಗ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಕೇಂದ್ರೀಕೃತವಾಗಿರುವ ಸಿನಿಮಾವಾಗಿದೆ.. ಶೂಜಿತ್ ಸಿರ್ಕಾರ್ ಅವರ ನಿರ್ದೇಶನದ ಸಿನಿಮಾ ಒಟಿಟಿಯಲ್ಲಿ ಸಿಕ್ಕಾಪಟ್ಟೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿತ್ತು.
ಶೇರ್ ಶಾ – IMDb Rating – 8.7
ಹಿಂದಿ ಸಿನಿಮಾ – ಸಿದ್ಧಾರ್ಥ್ ನಟನೆ
1999 ರ ಇಂಡೋ-ಪಾಕಿಸ್ತಾನ ಕಾರ್ಗಿಲ್ ಯುದ್ಧದ ಸಮಯದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಅದ್ಭುತ ಕಥೆಯನ್ನು ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಈ ಚಿತ್ರದ ಮೂಲಕ ಜನರಿಗೆ ತೋರಿಸಲಾಗಿದೆ.. ಯುದ್ಧದ ಸಮಯದಲ್ಲಿ ಕ್ಯಾಪ್ಟನ್ ಬಾತ್ರಾ ಅವರ ವೀರಗಾಥೆಯು ಸ್ಪೂರ್ತಿಯಾಗಿರಲಿದೆ..
ದೃಶ್ಯಂ 2 – IMDb Rating – 8. 5
ಮಲಯಾಳಂ ಸಿನಿಮಾ – ಮನೋಹರ್ ಲಾಲ್ ನಟನೆ
ಮೋಹನ್ ಲಾಲ್ ಅಭಿನಯದ ದೃಶ್ಯ 2 , ದೃಶ್ಯ 1 ಸಿನಿಮಾದ ಸೀಕ್ವೆಲ್.. ಸಸ್ಪೆನ್ಸ್ , ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾವಾಗಿದೆ.. ಈ ಸಿನಿಮಾವನ್ನ ಕನ್ನಡದಲ್ಲಿ , ತೆಲುಗಿನಲ್ಲಿ ರೀಮೇಪಕ್ ಮಾಡಲಾಗಿದ್ದು, ರವಿದಚಂದ್ರನ್ ನಟನೆಯ ದೃಶ್ಯ 2 ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಂಡ್ರೆ , ತೆಲುಗಿನಲ್ಲಿ ವೆಂಕಟೇಶ್ ನಟಿಸಿದ್ದ ಸಿನಿಮಾ ಒಟಿಟಿಯಲ್ಲಿ ಸಕ್ಸಸ್ ಕಂಡಿದೆ..
ಕರ್ಣನ್ – IMDb Rating – 8. 2
ತಮಿಳು ಸಿನಿಮಾ – ಧನುಷ್ ನಟನೆ
ಈ ಸಿನಿಮಾದಲ್ಲಿ ಧನುಷ್ ಅಭಿನಯ ನಿಮ್ಮನ್ನು ಅಳುವಂತೆ ಮಾಡುತ್ತದೆ. ಕಥೆಯು ತಪ್ಪು ಹಾದಿಯಲ್ಲಿರುವ ಒಳ್ಳೆಯ ಮನುಷ್ಯನ ಬಗ್ಗೆ ಕೇಂದ್ರೀಕೃತವಾಗಿದೆ. ಹಳೆಯ ತಲೆಮಾರಿನವರು ಸಮಾಜದಲ್ಲಿ ತಮ್ಮ ಸ್ಥಾನವನ್ನು ಒಪ್ಪಿಕೊಂಡಿರುವುದನ್ನು ನಾವು ನೋಡುತ್ತೇವೆ. ಆದರೆ ಕರ್ಣನ್ ಅದನ್ನು ಪ್ರಶ್ನಿಸುತ್ತಾರೆ. ಅವರ ಗ್ರಾಮಕ್ಕೆ ಏಕೆ ಬಸ್ ನಿಲ್ದಾಣವಿಲ್ಲ ಎಂದು ಪ್ರಶ್ನಿಸುತ್ತಾರೆ. ಮತ್ತು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ, ಅನ್ಯಾಯಕ್ಕೆ ಒಳಗಾದ ಹಳ್ಳಿಗೆ ನ್ಯಾಯ ಕೊಡಿಸಲು ಕೋಪದ ಮೂಲಕ ಹೋರಾಡುವ ಕಥೆ ಇದು..\
ಶಿದ್ಧತ್ – IMDb Rating – 8
ಮಿಮಿ – IMDb Rating – 8
ಮಾಸ್ಟರ್ – IMDb Rating – 7. 8
ಸೂರ್ಯವಂಶಿ – IMDb Rating – 6.5
ಹಸೀನ್ ದಿಲ್ ರುಭಾ – IMDb Rating – 6.3