ರಾಜಸ್ಥಾನ, ಮೇ 18 : ವಲಸೆ ಕಾರ್ಮಿಕನೊಬ್ಬ ವಿಕಲಾಂಗ ಮಗನನ್ನು ಕರೆದೊಯ್ಯಲು ಸೈಕಲ್ ಕದ್ದು, ಜತೆಗೆ ಕ್ಷಮಾಪಣೆ ಪತ್ರವನ್ನೂ ಬರೆದಿಟ್ಟ ಮನಮಿಡಿಯುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಭಾರತ್ ಪುರದಲ್ಲಿ ವಲಸೆ ಕಾರ್ಮಿಕನಾಗಿ ದುಡಿಯುತ್ತಿದ್ದ ಮೊಹ್ಮದ್ ಇಕ್ಬಾಲ್ ಖಾನ್ ಗೆ ತನ್ನ ವಿಕಲಾಂಗ ಮಗನನ್ನು ಹುಟ್ಟೂರು ಉತ್ತರ ಪ್ರದೇಶದ ಬರೈಲಿಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಉಂಟಾಯಿತು. ಆದರೆ ಆತನಲ್ಲಿ ಪಯಣಿಸಲು ಚಿಕ್ಕಾಸು ಇಲ್ಲದ ಕಾರಣ ಭಾರತ್ ಪುರದ ಸಾಹೀಬ್ ಸಿಂಗ್ ಎಂಬುವರ ಸೈಕಲ್ ಕದ್ದು , ಅವರಿಗೊಂದು ಪತ್ರವನ್ನು ಬರೆದು ತೆರಳಿದ. ದಯವಿಟ್ಟು ನನ್ನನ್ನು ಕ್ಷಮಿಸಿ, ನಿಮ್ಮ ಸೈಕಲ್ ಕದಿಯುತ್ತಿದ್ದೇನೆ. ನನ್ನ ಮಗ ವಿಕಲಾಂಗನಾಗಿದ್ದು, ಆತ ಒಂದು ಹೆಜ್ಜೆಯನ್ನು ಇಡಲಾರ. ನಾವು ಬರೈಲಿಗೆ ಹೋಗಬೇಕಿದೆ ಎಂದು ಪತ್ರದಲ್ಲಿ ಬರೆದಿದ್ದು, ಪತ್ರವನ್ನು ಓದಿದ ಸೈಕಲ್ ಮಾಲೀಕ ಸಾಹೀಬ್ ಸಿಂಗ್ ರ ಮನಸ್ಸು ಕರಗಿ, ಪೊಲೀಸರಿಗೆ ದೂರು ಕೊಡದೆ ಇಕ್ಬಾಲ್ ಖಾನ್ ನನ್ನು ಕ್ಷಮಿಸಿದ್ದಾರೆ.
ಮೋದಿ ಎಂದರೆ ಭಯವೇ ನಾವು ಕೇಜ್ರಿವಾಲ್ ಸೈನಿಕರು ಸಮೋಸಾ ಬೆಲೆ ಇಳಿಸುವುದಲ್ಲ ನಮ್ಮ ಗುರಿ ರಾಘವ್ ಚಡ್ಡಾಗೆ ಆಪ್ ತಿರುಗೇಟು
ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ಯುವ ನಾಯಕ ರಾಘವ್ ಚಡ್ಡಾ ಅವರನ್ನು ದಿಢೀರನೆ...








