ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿವುದು ಮೂಲಭೂತ ಹಕ್ಕಲ್ಲ : ಕೋರ್ಟ್
ಉತ್ತರ ಪ್ರದೇಶ : ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಿವುದು ಸಾಂವಿಧಾನಿಕ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
2021ರ ಡಿಸೆಂಬರ್ 3ರಂದು ಬದೌನ್ ಜಿಲ್ಲೆಯ ಬಿಸೌಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿದ್ದ ಮುಸ್ಲಿಂ ಮುಖಂಡ ಇರ್ಫಾನ್ ಆಜಾನ್‌ಗಾಗಿ ಧೋರನ್‌ಪುರ ಗ್ರಾಮದ ನೂರಿ ಮಸೀದಿಯಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲು ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ವಿವೇಕ್‌ಕುಮಾರ್ ಬಿರ್ಲಾ ಹಾಗೂ ನ್ಯಾಯಮೂರ್ತಿ ವಿಕಾಸ್ ಅವರಿದ್ದ ದ್ವಿ ಸದಸ್ಯ ನ್ಯಾಯಪೀಠವು, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಅಳವಡಿಸುವುದು ಸಾಂವಿಧಾನಿಕ ಹಕ್ಕಲ್ಲ ಎಂದು ಕಾನೂನು ಹೇಳುತ್ತದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿದಾರರು ತಮ್ಮ ಮನವಿಯಲ್ಲಿ, ಎಸ್‌ಡಿಎಂನ ಆದೇಶವು ಕಾನೂನುಬಾಹಿರ. ಇದು ಮೂಲಭೂತ ಮತ್ತು ಕಾನೂನು ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಉಲ್ಲೇಖಿಸಿದ್ದರು.
ಈಚೆಗಷ್ಟೇ ಉತ್ತರ ಪ್ರದೇಶದಲ್ಲೂ ಸಹ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಅನುಮತಿ ಪಡೆದ ಧ್ವನಿವರ್ಧಕಗಳನ್ನು ಮಾತ್ರವೇ ನಿಯಮಿತ ಶಬ್ಧದೊಂದಿಗೆ ಬಳಸುವಂತೆ ಸೂಚನೆ ನೀಡಿತ್ತು.
ಇದರಿಂದ ಹಿಂದೂ-ಮುಸ್ಲಿಂ ದೇವಾಯಗಳಲ್ಲೂ ಪ್ರಸಾರವಾಗುತ್ತಿದ್ದ ಧಾರ್ಮಿಕ ಕೈಂಕರ್ಯಗಳು ಆವರಣಕ್ಕೆ ಮಾತ್ರ ಸೀಮಿತವಾಗಿತ್ತು.