01. ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ನಟ, ಎಂಎನ್ ಎಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್, 2021ರ ಚುನಾವಣೆ ವೇಳೆ ತೃತೀಯ ರಂಗ ಮುನ್ನೆಲೆಗೆ ಬರಲಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : ದ್ರಾವಿಡನಾಡಲ್ಲಿ ತಲೆ ಎತ್ತಲಿದೆ `ತೃತೀಯ ರಂಗ’
02. ಹೈದರಾಬಾದ್ ಮೂಲದ ಪಕ್ಷಕ್ಕೆ ಬಿಜೆಪಿ ಹಣ ನೀಡುತ್ತದೆ ಎಂಬ ಮಮತಾ ಬ್ಯಾನರ್ಜಿ ಆರೋಪಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ತಿರುಗೇಟು ನೀಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : ನನ್ನನ್ನು ಖರೀದಿ ಮಾಡೋ ವ್ಯಕ್ತಿ ಹುಟ್ಟಿಲ್ಲ.. ಮುಂದೆ ಹುಟ್ಟಲ್ಲ
03. ಜೆಡಿಎಸ್ ನಾಯಕರ ವಿರುದ್ಧ ಆಗಾಗ ವಾಗ್ಬಾಣ ಬಿಡುತ್ತಲೇ ಬಂದಿರುವ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್, ಈ ಬಾರಿ ತೆನೆಹೊತ್ತ ಪಕ್ಷವನ್ನು ಮಿಠಾಯಿ ಪಕ್ಷವೆಂದು ಲೇವಡಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : ಮಿಠಾಯಿ ತೋರಿಸಿದ್ ಕಡೆ ಜೆಡಿಎಸ್ ಕೂಸು ಹೋಗುತ್ತೆ: ದಳಪತಿ ವಿರುದ್ಧ ಹಳ್ಳಿಹಕ್ಕಿ ಟಾಂಗ್
04.ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಪ್ರಚಾರಕ್ಕೆ ತೆರಳಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಮೂಡಿಗೆತೆ ಜಾಂಬಳೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ :ಪ್ರಚಾರಕ್ಕೆ ಬಂದ ಶೋಭಾ ಕರಂದ್ಲಾಜೆಗೆ ಗ್ರಾಮಸ್ಥರಿಂದ ತರಾಟೆ
05. ನಾವು ಬಿಜೆಪಿಯವರು ಸಭ್ಯಸ್ಥರು, ಕಾಂಗ್ರೆಸ್‍ನವರೆ ಗಲಾಟೆ ಮಾಡಿದ್ದು ಎಂದು ವಿಧಾನ ಪರಿಷತ್ ನಲ್ಲಿ ನಡೆದ ಗಲಾಟೆ ಬಗ್ಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಆರೋಪಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : ನಾವು ಬಿಜೆಪಿಯವರು ಸಭ್ಯಸ್ಥರು : ಎಂ.ಪಿ.ರೇಣುಕಾಚಾರ್ಯ