Imran Khan: ನನ್ನ ಕಾಲಿನಿಂದ 3 ಬುಲೆಟ್ ಗಳನ್ನ ತೆಗೆಯಲಾಗಿದೆ ಎಂದ – ಇಮ್ರಾನ್ ಖಾನ್
ಪಾಕಿಸ್ತಾನದ ಗುಜ್ರಾನ್ವಾಲಾದ ರ್ಯಾಲಿಯಲ್ಲಿ ನಡೆದ ಗುಂಡಿನ ದಾಳಿಯ ನಂತರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಕಾಲಿನಿಂದ ಮೂರು ಗುಂಡುಗಳನ್ನ ಹೊರತೆಗಿಯಲಾಗಿದೆ ಎಂದು ಸ್ವತಃ ಇಮ್ರಾನ್ ಖಾನ್ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥಇಮ್ರಾನ್ ಖಾನ್ ಲಾಹೋರ್ನ ಜಮಾನ್ ಪಾರ್ಕ್ನಲ್ಲಿರುವ ತಮ್ಮ ನಿವಾಸದಿಂದ ಟಿವಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಇಮ್ರಾನ್, ಎರಡು ತಿಂಗಳ ಹಿಂದೆಯೇ ತನ್ನನ್ನು ಕೊಲ್ಲಲು ಯೋಜನೆ ರೂಪಿಸಲಾಗಿತ್ತು ಎಂದು ಆರೋಪಿಸಿದ್ದಾರೆ.
ಮೂರೂವರೆ ವರ್ಷಗಳ ಕಾಲ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ ಅವರು ಗುಪ್ತಚರ ಸಂಸ್ಥೆಗಳು ಮತ್ತು ವಿವಿಧ ಏಜೆನ್ಸಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಧಾನಿ ಹುದ್ದೆ ಕೈತಪ್ಪಿದ ಬಳಿಕ ಪಕ್ಷ ಇಬ್ಭಾಗವಾಗುತ್ತದೆ ಎಂದು ಭಾವಿಸಿದ್ದೆ ಆದರೆ ಜನರ ಬೆಂಬಲ ಸಿಕ್ಕಿದ್ದರಿಂದ ಹತ್ಯೆಗೆ ಯೋಜನೆ ರೂಪಿಸಿದ್ದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.
ಆಡಳಿತಾರೂಢ ಸರ್ಕಾರ ತನ್ನ ಮೇಲೆ ದಾಳಿ ನಡೆಸಲು ಯೋಜಿಸಿದೆ ಎಂದು ಆರೋಪಿಸಿದರು. ತನ್ನ ಮೇಲೆ ಯೋಜಿತ ಹತ್ಯೆ ಯತ್ನ ನಡೆದಿದೆ ಎಂದು ಹೇಳಿದ ಅವರು, ದೇಶದ ರಾಷ್ಟ್ರಪತಿ ಆರಿಫ್ ಅಲ್ವಿ ಅವರಿಗೆ ಪತ್ರ ಬರೆದಿದ್ದಾರೆ.
Imran Khan: 3 bullets were removed from my leg – Imran Khan