ಪಾಕಿಸ್ತಾನದ : ಪಾಕಿಸ್ತಾನದ ರಾಜದಾನಿಯಾಗಿರುವ ಿಸ್ಲಮಾಬಾದ್ ನಲ್ಲಿ ಮೂರು ದಿನಗಳ ಕಾಲ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.. ಇಸ್ಲಾಮಿಕ್ ಸಹಕಾರ ಸಂಘಟನೆಯು (ಓಐಸಿ) ವಿದೇಶಾಂಗ ಸಚಿವರೊಂದಿಗೆ ಅಧಿವೇಶನ ಆಯೋಜಿಸಿರುವ ಕಾರಣಕ್ಕೆ ಇಸ್ಲಾಮಾಬಾದ್ ನಲ್ಲಿ 3 ದಿನಗಳವರೆಗೂ ಮೊಬೈಲ್ ಫೋನ್ ಸೇವೆ ಸ್ಥಗಿತಗೊಳಿಸಿರುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ.
ಒಐಸಿಯು ವಿದೇಶಾಂಗ ಸಚಿವರ ಜೊತೆ ಅಧಿವೇಶನವನ್ನು ಶುಕ್ರವಾರ ಪ್ರಾರಂಭಿಸುವುದರಿಂದ ಡಿಸೆಂಬರ್ 17 ರಿಂದ 19ರವರೆಗೂ ಮೂರು ದಿನಗಳವರೆಗೆ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸುತ್ತಿರುವುದಾಗಿ ಆಂತರಿಕ ಸಚಿವಾಲಯ ಪ್ರಕಟಿಸಿದೆ.
ಆಗಸ್ಟ್ ನಲ್ಲಿ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಅಗತ್ಯವಿರುವ ಅಫ್ಘಾನಿಸ್ತಾನದ ಲಕ್ಷಾಂತರ ಜನರಿಗೆ ಆಹಾರ, ಔಷಧ ಮತ್ತು ಆಶ್ರಯವನ್ನು ಒದಗಿಸುವ ಬಗ್ಗೆ ಒಐಸಿ ಅಧಿವೇಶನದಲ್ಲಿ ಚರ್ಚೆ ನಡೆಸಲಿದೆ. ಇಸ್ಲಾಮಾಬಾದ್ ವಿಮಾನ ನಿಲ್ದಾಣದಿಂದ ರೆಡ್ ಜೋನ್ವರೆಗೂ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಈ ಸಂಬಂಧ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಆಂತರಿಕ ಸಚಿವಾಲಯದಿಂದ ಪತ್ರ ಸ್ವೀಕರಿಸಿದೆ.
ಅಧಿವೇಶನವನ್ನು ಆಯೋಜಿಸಲು ಸಂಸತ್ ಭವನದ ನಿರ್ವಹಣೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಎಂಟು ದಿನಗಳ ಕಾಲ ಹಸ್ತಾಂತರಿಸಲಾಗಿದೆ.