ಕ್ರಿಕೆಟ್ ನಲ್ಲಿ `ಬ್ಯಾಟ್ಸ್ ಮ್ಯಾನ್’ ಬದಲಾಗಿ `ಬ್ಯಾಟರ್’ ಪದ ಬಳಕೆ
ಲಂಡನ್ : ಕ್ರಿಕೆಟ್ ನಲ್ಲಿ ಬೌಲರ್.. ಫೀಲ್ಡರ್.. ಕೀಪರ್.. ಎಂಬ ಪದ ಬಳಕೆಯಂತೆ ಬ್ಯಾಟ್ಸ್ ಮೆನ್ ಬದಲಾಗಿ ಬ್ಯಾಟರ್ ಎಂಬ ಪದ ಬಳಕೆ ಮಾಡಲು ಮಾರ್ಲೆಬೋನ್ ಕ್ರಿಕೆಟ್ ಸಂಸ್ಥೆ ಸಲಹೆ ನೀಡಿದೆ.
ಕ್ರಿಕೆಟ್ ನಲ್ಲಿ ಮಹಿಳಾ ಮತ್ತು ಪುರುಷರ ಲಿಂಗ ಸಮಾನತೆ ಸಲುವಾಗಿ ಬ್ಯಾಟರ್ ಪದ ಬಳಸುವಂತೆ ಮಾರ್ಲೆಬೋನ್ ಕ್ರಿಕೆಟ್ ಸಂಸ್ಥೆ ತೀರ್ಮಾನಿಸಿದೆ.
ಐಸಿಸಿ ಇದೀಗ ಈ ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.
ಇತ್ತೀಚೆಗೆ ಮಹಿಳಾ ಕ್ರಿಕೆಟ್ ಕೂಡ ಪುರುಷ ಕ್ರಿಕೆಟ್ ನಂತೆ ಜನಪ್ರಿಯತೆ ಗಳಿಸುತ್ತಿದೆ.
ಆದರೆ ಮಹಿಳಾ ಕ್ರಿಕೆಟ್ ಗೆ ಬ್ಯಾಟ್ಸ್‍ಮ್ಯಾನ್ ಎಂಬ ಪದ ಸರಿಹೊಂದುತ್ತಿರಲಿಲ್ಲ. ಹಾಗಾಗಿ ಬ್ಯಾಟ್ಸ್ ಮೆನ್ ಬದಲಾಗಿ ಬ್ಯಾಟರ್ ಪದ ಬಳಸಲು ಮುಂದಾಗಿದೆ.
ಸದ್ಯ ಪುರುಷ ಮತ್ತು ಮಹಿಳೆ ಕ್ರಿಕೆಟ್ ನಲ್ಲಿ ಸಮನಾಗಿ ಬೌಲರ್ ಮತ್ತು ಫೀಲ್ಡರ್ ಎಂಬ ಪದ ಬಳಕೆಯಾಗುತ್ತಿದೆ.
ಅದರಂತೆ ಬ್ಯಾಟ್ಸ್‍ಮ್ಯಾನ್ ಬದಲಾಗಿ ಬ್ಯಾಟರ್ ಅಥವಾ ಬ್ಯಾಟರ್ಸ್ ಪದ ಬಳಕೆಗೆ ಎಂಸಿಸಿ ಮುಂದಾಗಿದೆ.










