ಭೀಕರ ರಸ್ತೆ ಅಪಘಾತ | ಆರು ಮಂದಿ ಸಾವು

1 min read
road accident

ಭೀಕರ ರಸ್ತೆ ಅಪಘಾತ | ಆರು ಮಂದಿ ಸಾವು bihar saaksha tv

ಬಿಹಾರ : ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಜಮುಯಿ ಎಂಬಲ್ಲಿ ನಡೆದಿದೆ.

ಹಲ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಪ್ರಾ ಎಂಬ ಹಳ್ಳಿಯ ಸಮೀಪ ಸಿಕಂದ್ರಾ-ಶೇಖ್ ಪುರ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲು ಮಾಡಲಾಗಿದೆ.

ಮೃತಪಟ್ಟವರಲ್ಲಿ 5 ಮಂದಿ ಜಮುಯಿಯ ಖೈರಾ ಬ್ಲಾಕ್ ನ ನೌದಿಹಾದವರಾಗಿದ್ದು, ಮತ್ತೊಬ್ಬರು ಸ್ಥಳೀಯರಲ್ಲ ಎಂದು ತಿಳಿದುಬಂದಿದೆ.

bihar  saaksha tv

ಇವರು ಜಮುಯಿ ಖೈರಾದಿಂದ ಪಾಟ್ನಾಕ್ಕೆ ಒಂದು ಅಂತ್ಯಕ್ರಿಯೆಗಾಗಿ ತೆರಳಿದ್ದರು. ಅಲ್ಲಿಂದ ವಾಪಸ್ ಬರುವಾಗ ಅಪಘಾತ ಉಂಟಾಗಿದೆ.

ಭೀಕರ ಅಪಘಾತವಾಗುತ್ತಿದ್ದಂತೆ ಸ್ಥಳಕ್ಕೆ ಜನರು ದಾವಿಸಿದ್ದು, ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಮೃತರ ಮತ್ತು ಗಾಯಗೊಂಡವರ ಕುಟುಂಬಕ್ಕೆ ವಿಷಯ ತಿಳಿಸಲಾಗಿದೆ. ಇತ್ತ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd