ಕೊರೊನಾ ಭಯದಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು
ಆಂಧ್ರಪ್ರದೇಶ : ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಈ ನಡುವೆ ಚಿಕ್ಕ ಕೆಮ್ಮು , ನೆಗಡಿ ಜ್ವರ ಬಂದ್ರೂ ಜನ ಹೆದರಿಕೆಯಿಂದ ಪ್ಯಾನಿಕ್ ಆಗ್ತಿರುವುದು ಕಂಡು ಬರುತ್ತಿದೆ.. ಅಲ್ಲದೇ ಅನೇಕರು ಆತ್ಮಹತ್ಯೆಯಂತ ದುಡುಕು ನಿರ್ದಾರಗಳನ್ನೂ ತೆಗೆದುಕೊಂಡಿದ್ದಾರೆ..
ಇದೀಗ ಕೊರೊನಾ ಸೋಂಕು ತಗುಲಬಹುದು ಎಂಬ ಭೀತಿಯಿಂದ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವಡೇಗೇರಿ ಬಡಾವಣೆಯಲ್ಲಿ ಸಂಭವಿಸಿದೆ.
ಕೇರಳದಲ್ಲಿ ಹೈ ಅಲರ್ಟ್ – ರಾಜ್ಯದಲ್ಲಿ ಮೂರು ಡೆಲ್ಟಾ ಪ್ಲಸ್ ವೇರಿಯಂಟ್ ಪತ್ತೆ
ತಂದೆ ತಾಯಿ ಇಬ್ಬರು ಮಕ್ಕಳು ಸಾವನಪ್ಪಿದ್ದಾರೆ. ಪ್ರತಾಪ್ (42), ಹೇಮಲತಾ (36), ಜಯಂತ್ (17) ರಿಷಿತಾ (14) ಆತ್ಮಹತ್ಯೆ ಮಾಡಿಕೊಂಡು ಮೃತೊಟ್ಟಿದ್ದಾರೆ. ಪ್ರತಾಪ್ ಟಿವಿ ಚಾನೆಲ್ ನಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಜಯಂತ್ ಪ್ರೌಢಶಾಲೆಯಲ್ಲಿ ಓದುತ್ತಿ . ರಿಷಿತಾ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು ಎನ್ನಲಾಗಿದೆ.
ಕುಟುಂಬದ ಸದಸ್ಯರು ಯಾರೂ ಹೊರಗೆ ಕಾಣಿಸಿಕೊಳ್ಳದ ಕಾರಣ ನೆರೆಮನೆಯವರು ಬಾಗಿಲು ತಟ್ಟಿದರೂ ಬಾಗಿಲು ತೆರೆಯಲಿಲ್ಲ. ಇದರಿಂದ ಮಾಹಿತಿ ಪಡೆದ ಪೊಲೀಸರು ಬಾಗಿಲು ತೆರೆದು ನೋಡಿದಾಗ ನಾಲ್ವರು ನೆಲದ ಮೇಲೆ ಸತ್ತು ಮಲಗಿದ್ದರು.
ಸಾಯುವ ಮುನ್ನ ಬರೆದ ಡೆತ್ ನೋಟ್ ನಲ್ಲಿ ತಮ್ಮ ಸಂಪರ್ಕದಲ್ಲಿದ್ದ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ಹಲವಾರು ಮಂದಿ ಕೊರೊನಾಗೆ ಬಲಿಯಾಗಿದ್ದರು. ಇದರಿಂದ ನಮಗೂ ಸೋಂಕು ಹರಡಬಹುದು ಎಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿಟ್ಟಿದ್ದಾರೆ.