ಕಳೆದ 24 ಗಂಟೆಗಳಲ್ಲಿ 2,568 ಕೋವಿಡ್ ಸೋಂಕು ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ
ಕಳೆದ 24 ಗಂಟೆಗಳಲ್ಲಿ ಭಾರತ 2,568 ಹೊಸ ಕರೋನವೈರಸ್ ಸೋಂಕುಗಳನ್ನ ದಾಖಲಿಸಿದೆ. ಒಟ್ಟು COVID-19 ಪ್ರಕರಣಗಳ ಸಂಖ್ಯೆಯನ್ನು 4,30,84,913 ಕ್ಕೆ ಏರಿಕೆಯಾಗಿದೆ, ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಕೊಂಚ ಇಳಿದಿದ್ದು 19,137 ಕ್ಕೆ ಬಂದು ನಿಂತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ನಿನ್ನೆ ದಿನ 20 ಮಂದಿ ಕರೋನಾ ವೈರಸ್ ನಿಂದ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 5,23,889 ಕ್ಕೆ ಏರಿಕೆಯಾಗಿದೆ ಸಕ್ರಿಯ ಪ್ರಕರಣಗಳ ಒಟ್ಟು ಸೋಂಕುಗಳಲ್ಲಿ 0.04 % ಒಳಗೊಂಡಿವೆ, ಆದರೆ ರಾಷ್ಟ್ರೀಯ COVID-19 ಚೇತರಿಕೆ ದರವು 98.74 % ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
24 ಗಂಟೆಗಳ ಅವಧಿಯಲ್ಲಿ ಸಕ್ರಿಯ COVID-19 ಕ್ಯಾಸೆಲೋಡ್‌ನಲ್ಲಿ 363 ಪ್ರಕರಣಗಳು ಇಳಿಕೆಯಾಗಿದೆ. ಸಚಿವಾಲಯದ ಪ್ರಕಾರ ದೈನಂದಿನ ಪಾಸಿಟಿವಿಟಿ ದರವು 0.61% ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರವು 0.71 % ದಾಖಲಾಗಿದೆ. ದೇಶಾದ್ಯಂತ ಇಲ್ಲಿಯವರೆಗೆ ಕರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 4,25,41,887 ಕ್ಕೆ ತಲುಪಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಇದುವರೆಗೆ ನೀಡಲಾದ ಸಂಚಿತ ಡೋಸ್‌ಗಳ ಸಂಖ್ಯೆ 189.23 ಕೋಟಿ ಮೀರಿದೆ.
In the last 24 hours, 2,568 infections were detected and the number of active cases decreased