ರಾಜ್ಯದಲ್ಲಿ ಸಿಎಂ ಕುರ್ಚಿ ಕುರಿತಾಗಿ ನಡೆಯುತ್ತಿರುವ ರಾಜಕೀಯ ಕಿತ್ತಾಟಕ್ಕೆ ಮತ್ತೊಂದು ಟೀಕೆ ಸೇರ್ಪಡೆಯಾಗಿದೆ. ವಿಪಕ್ಷ ನಾಯಕ ಆರ್. ಅಶೋಕ್ ಅವರು ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಸರ್ಕಾರ ರೈತರ ಸಂಕಷ್ಟಗಳನ್ನು ಸಂಪೂರ್ಣವಾಗಿ ಮರೆತಿರುವಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ–ಡಿಕೆಶಿ ಬಣದ ಒಳಜಗಳ, ಅಧಿಕಾರ ಹಂಚಿಕೆ ಮತ್ತು ಕುರ್ಚಿ ಭದ್ರತೆ ಇದರಲ್ಲೇ ಸರ್ಕಾರ ತೊಡಗಿಕೊಂಡಿದೆ. ರೈತರ ನೋವು, ಆತ್ಮಹತ್ಯೆಗಳು, ಬೆಳೆ ನಾಶ, ಹಾನಿ ಪರಿಹಾರ ಇಂತಹ ಯಾವುದೇ ವಿಷಯ ಸರ್ಕಾರದ ಗಮನಕ್ಕೆ ಬಂದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಇತಿಹಾಸದಲ್ಲಿ ರೈತರ ಸಮಸ್ಯೆಗೆ ಸ್ಪಂದಿಸದ ಇಷ್ಟು ಸಂವೇದನಾಶೂನ್ಯ ಸರ್ಕಾರ ನಾನು ಕಂಡಿಲ್ಲ. ಸರ್ಕಾರದ ಮುಖ್ಯ ಗುರಿ ಜನರ ಸಮಸ್ಯೆ ಅಲ್ಲ ಕುರ್ಚಿ ಉಳಿಸಿಕೊಳ್ಳೋದು ಮಾತ್ರ ಎಂದು ಆರ್ ಆಶೋಕ್ ಕಿಡಿಕಾರಿದರು.
ರೈತರ ಬದುಕು ನಾಶವಾದರೂ ಪರವಾಗಿಲ್ಲ, ನಮ್ಮ ಕುರ್ಚಿ ಭದ್ರವಾಗಿರಲಿ ಎಂಬ ನಿಲುವಿನಲ್ಲಿ ಸಿಎಂ–ಡಿಸಿಎಂ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.








