ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ಉದ್ಘಾಟನೆ

1 min read

ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ಉದ್ಘಾಟನೆ

ಬೆಂಗಳೂರು : ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ನೂತನ ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಮನ್ಸುಖ್.ಎಲ್.ಮಾಂಡವೀಯ ಅವರು ಉದ್ಘಾಟಿಸಿದರು. ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಂಸದ ಪಿ ಸಿ ಮೋಹನ್, ಸೇರಿದಂತೆ ಹಲವು ಗಣ್ಯರ ಉಪಸ್ಥಿತರಿದ್ದರು.

ಆಸ್ಪತ್ರೆಯ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಸ್ಪತ್ರೆ ಆವರಣದಲ್ಲಿ ಈ ರೀತಿ ಗ್ಯಾಸ್ಟ್ರಲ್ ಆಸ್ಪತ್ರೆ ಆಗಲಿದೆ ಅಂತ ಯಾರು ಅಂದುಕೊಂಡಿರಲಿಲ್ಲ. ಇದೆಲ್ಲದಕ್ಕೂ ದಾನಿಗಳು ಕಾರಣ. ನಾವು ಈ ಇನ್ಸ್ಟಿಟ್ಯೂಟ್ ಬಗ್ಗೆ ಹೇಳೋದಾದ್ರೆ, ಸುಧಾಕರ್ ಹಾಗೂ ಎಲ್ಲಾ ಶಾಸಕರು, ಸಂಸದರು ಕೆಲಸ ಮಾಡಿದ್ದಾರೆ. ಇನ್ನು ಈ ಆಸ್ಪತ್ರೆಯಲ್ಲಿ ಲಿವರ್ ಸೇರಿದಂತೆ ಯಾವುದೇ ಅಂಗಾಗ ಕಸಿ ಮಾಡಿದ್ರು ಎಸ್ ಟಿ-ಎಸ್ ಟಿ, ಒಬಿಸಿ ವರ್ಗಕ್ಕೆ ಉಚಿತವಾಗಿ ಮಾಡಲಾಗುತ್ತಿದೆ. ಇದರಿಂದ ವಿಕ್ಟೋರಿಯಾ, ವಾಣಿವಿಲಾಸ, ಮಿಂಟೋ ಉತ್ತಮವಾಗಿ ಬೆಳೆಯುತ್ತಿದೆ. ನಮ್ಮ ಸರ್ಕಾರ ಆರೋಗ್ಯ ಕರ್ನಾಟಕ ಮಾಡಲು ಸಂಕಲ್ಪ ಮಾಡಿದೆ. ಬರುವ ದಿನಗಳಲ್ಲಿ ಹೆಲ್ತ್ ವಿಷನ್ ಮಾಡಲಿದೆ ಎಂದು ತಿಳಿಸಿದರು.

ಇನ್ನು ಹೊಸ ಸಂಸ್ಥೆ ಪ್ರತ್ಯೇಕವಾಗಿ ಇರೋದು ಇದೇ ಮೊದಲು. ಇಲ್ಲಿ ತಜ್ಞರು ಇದ್ದಾರೆ, ವಿಧಿ, ವಿಜ್ಞಾನದ ಮೂಲಕ ಕೆಲಸ ಮಾಡಲಿದೆ. ಬಹಳಷ್ಟು ಜನ ನರಳುತ್ತಿದ್ದು, ನಮ್ಮ ಆಹಾರ ಪದ್ಧತಿ ಎಲ್ಲವೂ ಗ್ಯಾಸ್ಟ್ರೋ ಸಂಸ್ಥೆ ಕೆಲಸ ಮಾಡಲಿದೆ. ಸೈನ್ಸ್ ಡೆವಲಪ್ ಆದಂತೆ, ಅದರ ಮೇಲೆ ಟೆಕ್ನಾಲಜಿ ಡೆವಲಪ್ ಆದಾಗ ಸರ್ಕಾರ ಅದರ ಮೇಲೆ ಕೆಲಸ ಮಾಡಲಿದೆ. ಪ್ರಗತಿಪರ ಸರ್ಕಾರ ಕರ್ನಾಟಕದಲ್ಲಿದೆ. ಅದಕ್ಕೆ ಉದಾಹರಣೆಗೆ ಈ ಸಂಸ್ಥೆ. 30ಕೋಟಿ ಸರ್ಕಾರದ ಅನುದಾನದಲ್ಲಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಯಲ್ಲಿ ಉತ್ತಮ ಸಂಸ್ಕೃತಿ ಇದೆ. ಇಲ್ಲಿ ನಿಜಕ್ಕೂ ಉತ್ತಮ ವಾತಾವರಣ ಇದೆ. ಇಲ್ಲಿ ನಿಜಕ್ಕೂ ಬಡವರಿಗೆ ಉತ್ತಮ ಚಿಕಿತ್ಸೆ ನೀಡಿ. ಎಲ್ಲರೂ ಎಥಿಕಲ್ ಆಗಿ ಕೆಲಸ ಮಾಡಿ. ಎಥಿಕಲ್ ಕ್ಲಿನಿಕಲ್ ಪ್ರಾಕ್ಟಿಸ್ ಅಗತ್ಯವಿದೆ. ಅಂಗಾಂಗ ಕಸಿ ಪ್ರಕ್ರಿಯೆಯಲ್ಲಿ ಮೋಸ ಆಗಬಾರದು. ಸತ್ಯ ಮಾರ್ಗದಲ್ಲಿ ಕಸಿ ಕಾರ್ಯ ನಡೆಯಬೇಕು. ಕಿಡ್ನಿ ಕಸಿ, ಹೃದಯ ಕಸಿ ಗಾಗಿ ಬಡವರು ಕ್ಯೂ ನಿಲ್ಲುತ್ತಿದ್ದಾರೆ. ಕಸಿ ಚಿಕಿತ್ಸೆಯಲ್ಲಿ ಶೋಷಣೆ ನಿಲ್ಲಬೇಕು. ಅಂಗಾಂಗ ಕಸಿ ಆಗದೆ ಯಾವ ಬಡವನು ಸಾಯಬಾರದು ಎಂದು ಆಸ್ಪತ್ರೆವರ್ಗಕ್ಕೆ ಎಚ್ಚರಿಕೆಯ ಸಲಹೆ ನೀಡಿದರು.

Gastroenterology Sciences saaksha tv

ಬಳಿಕ ಕೇಂದ್ರ ಸಚಿವ ಡಾ.ಮನ್ಸುಖ್.ಎಲ್.ಮಾಂಡವೀಯ ಮಾತನಾಡಿ, ಬಡವರು ಅಂಗಾಂಗ ಕಸಿ ಮಾಡಿಸಕೊಳ್ಳುವುದು ಕಷ್ಟ. ಶ್ರೀಮಂತರಿಗೆ ಖಾಯಿಲೆ ಬಂದ್ರೆ ಆಪರೇಷನ್ ಮಾಡಿಸಿಕೊಳ್ತಾರೆ. ಆದ್ರೆ ಬಡವರಿಗೆ ಬಂದಾಗ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಅಂತ ಕಡು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕೆಲಸ ಕರ್ನಾಟಕ ಸರ್ಕಾರ ಮಾಡಿದೆ.ಆರೋಗ್ಯ ಸಚಿವರು ಹೇಳ್ತಿದ್ರು, ಸಿಎಂ ಬೊಮ್ಮಾಯಿ ಅವರು ಆರೋಗ್ಯ ವಿಷನ್ ಇಟ್ಟುಕೊಂಡಿದ್ದಾರೆ ಅಂತ. ಉಚಿತವಾಗಿ ಕಸಿ ಚಿಕಿತ್ಸೆ ನೀಡುವ ಮೂಲಕ ಕರ್ನಾಟಕ ಸರ್ಕಾರ ಎಲ್ಲ ರಾಜ್ಯಗಳಿಗಿಂತ ಮುಂದಿದೆ. ಪ್ರಧಾನಮಂತ್ರಿಗಳ ಯೋಜನೆಯನ್ನ ಸದ್ಬಳಕೆ ಮಾಡಿಕೊಂಡಿದ್ದಾರೆ. ಆರೋಗ್ಯ ಸ್ವಾಸ್ತ್ಯ ಯೋಜನೆ, ಅಂತ್ಯೋದಯ ಯೋಜನೆ ಮೂಲಕ ಬಡವರಿಗಾಗಿ ಕೆಲಸ ಮಾಡ್ತಿದೆ.
ಈ ಇನ್ಸ್ಟಿಟ್ಯೂಟ್ ನಲ್ಲಿ ಎಲ್ಲರೂ ಉತ್ತಮ ಕೆಲಸ ಮಾಡಬೇಕಿದೆ. ಅನೇಕರು ಇದಕ್ಕಾಗಿ ದಾನ ಮಾಡಿದ್ದು, ಉನ್ನತ ಮಟ್ಟಕೆ ಬೆಳೆಯಲಿ ಎಂದು ಶುಭಕೋರಿದರು.

ಇನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಜನರಲ್ಲಿ ಅಂಗಾಂಗ ದಾನದ ಬಗೆಗಿನ ಮೂಡನಂಬಿಕೆ ಇನ್ನೂ ಮಾಯವಾಗಿಲ್ಲ. 0.3 % ಮಾತ್ರ ದೇಶದ ಜನ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಅಂಗಾಂಗ ದಾನದಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಅಂಗಾಂಗ ಕಸಿ ಪ್ರಕ್ರಿಯೆ ಸಾಕಷ್ಟು ದುಬಾರಿ ಇದೆ. ಆದರೆ ನಮ್ಮಲ್ಲಿ ಅಂಗಾಂಗ ಕಸಿ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ. ಭಾರತದಲ್ಲಿ 5 ಲಕ್ಷ ಜನ ಅಂಗಾಂಗ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಸತ್ತ ನಂತರ ದೇಹ ದಾನ ಮಾಡಬೇಕಾದ ಅರಿವು ಮೂಡಬೇಕಿದೆ ಎಂದು ತಿಳಿಸಿದರು.

ಇನ್ನು ಅಮೆರಿಕಾ ವಿಶ್ವಕ್ಕೆ ಅಂಗಾಗ ದಾನ ಮಾಡೋದ್ರಲ್ಲಿ ಮೊದಲ ಸ್ಥಾನದಲ್ಲಿ ಇದೆ. ನಮ್ಮ ರಾಜ್ಯದಲ್ಲಿ ಅಂಗಾಗ ದಾನ ಮಾಡುವ ಬಗ್ಗೆ ವಿಶೇಷ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಉಚಿತ ಅಂಗಾಗ ಕಸಿ ಮಾಡುವ ಯೋಜನೆ ಜಾರಿಗೆ ತರಲಾಗಿದೆ. ಲಿವರ್ ಸೇರಿದಂತೆ ಯಾವುದೇ ಅಂಗಾಗ ಕಸಿ ಮಾಡಿದ್ರು ಎಸ್ ಸಿ-ಎಸ್ ಟಿ, ಒಬಿಸಿ ವರ್ಗಕ್ಕೆ ಉಚಿತವಾಗಿ ಮಾಡಲಾಗುತ್ತಿದೆ. ಕಲಬುರಗಿ, ಹುಬ್ಬಳ್ಳಿ, ಮೈಸೂರು ಸೇರಿದಂತೆ ಪ್ರಾದೇಶಿಕ ವಲಯಗಳಲ್ಲಿ ಅಂಗಾಗ ಸ್ಟೋರ್ ಮಾಡುವ ಸಂಸ್ಥೆ ಪ್ರಾರಂಭ ಮಾಡಲಾಗುತ್ತಿದೆ. ಅಂಗಾಗ ದಾನ ಮಾಡೋ ಬಗ್ಗೆ ಸಿಎಂ ವಿಶೇಷ ಜಾಗೃತಿ ಮೂಡಿಸಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದರು.

40 ಕೋಟಿ ವೆಚ್ಚ : 120 ಹಾಸಿಗೆ ಸೌಲಭ್ಯ
ಈ ಆಸ್ಪತ್ರೆಯನ್ನು 40 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ 120 ಹಾಸಿಗೆ ಸೌಲಭ್ಯವಿದ್ದು, ಇಲ್ಲಿ ಗ್ಯಾಸ್ಟ್ರೊಎಂಟ್ರಾಲಜಿ ಕಾಯಿಲೆಗಳಾದ ಕ್ಯಾನ್ಸರ್ ಮತ್ತು ಲಿವರ್ ಕಸಿ, ಬೇರಿಯಾಟ್ರಿಕ್ ಸರ್ಜರಿ, ಲ್ಯಾಪರೋಸ್ಕೋಪಿಕ್ ಸರ್ಜರಿಗಳು, ರೊಬೋಟಿಕ್ ಶಸ್ತ್ರಚಿಕಿತ್ಸೆ, ಹೊರರೋಗಿ ಮತ್ತು ಒಳರೋಗಿ ಚಿಕಿತ್ಸೆ ಸೌಲಭ್ಯವಿದೆ..

ಇನ್ನು ಕಾರ್ಯಕ್ರಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕಾಗಿ ಕೈ ಜೋಡಿಸಿ ಸಹಾಯ ಮಾಡಿದ ದಾನಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಡಾ.ಮನ್ಸುಖ್.ಎಲ್.ಮಾಂಡವೀಯ ಅವರು ಸನ್ಮಾನ ಮಾಡಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd