ವದೆಹಲಿ: ಕಾರ್ಮಿಕರಿಗೆ ಕನಿಷ್ಠ ವೇತನ ದರವನ್ನು ಕೇಂದ್ರ ಸರ್ಕಾರವು (Union Government) ಹೆಚ್ಚಿಸಿದೆ. ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ (VDA) ಪರಿಷ್ಕರಣೆ ಮೂಲಕ ಈ ವೇತನ ದರ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಈ ವೇತನ ಹೆಚ್ಚಳ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಕಾರ್ಮಿಕರಿಗೆ, ಅಸಂಘಟಿತ ವಲಯದಲ್ಲಿರುವವರಿಗೆ, ಆರ್ಥಿಕ ನಿರ್ವಹಣೆಗೆ ಸಹಕಾರಿಯಾಗಲಿದೆ. ಪರಿಷ್ಕೃತ ವೇತನವು ಕಟ್ಟಡ ಕಾರ್ಮಿಕರು, ಲೋಡಿಂಗ್ ಮತ್ತು ಅನ್ ಲೋಡಿಂಗ್, ವಾಚ್ ಮತ್ತು ವಾರ್ಡ್, ಕಸ ಗುಡಿಸುವುದು, ಸ್ವಚ್ಛತೆ, ಮನೆಗೆಲಸ, ಗಣಿಗಾರಿಕೆ ಮತ್ತು ಕೃಷಿ ಸೇರಿದಂತೆ ವಿವಿಧ ವಲಯಗಳಲ್ಲಿನ ಕಾರ್ಮಿಕರಿಗೆ ಈ ನಿಯಮ ಅನ್ವಯಿಸಸಿದೆ.
ಕೌಶಲ್ಯಮಟ್ಟಕ್ಕೆ ಅನುಗುಣವಾಗಿ ಕನಿಷ್ಠ ವೇತನ ದರ ಹೆಚ್ಚಿಸಲಾಗಿದೆ. ಕೌಶಲ್ಯರಹಿತ, ಅರೆ-ಕುಶಲ, ಕೌಶಲ್ಯ ಮತ್ತು ಹೆಚ್ಚು ನುರಿತ ಹಾಗೂ ಇನ್ನಿತರ ವರ್ಗಗಳಿಗೆ ಎ,ಬಿ.ಸಿ ಎಂದು ವರ್ಗೀಕರಿಸಲಾಗಿದೆ.
ವೇತನ ಪರಿಷ್ಕರಣೆ ಅಡಿಯಲ್ಲಿ ಎ- ವರ್ಗದಲ್ಲಿರುವವರು ದಿನಕ್ಕೆ 783 ರೂ.ಗಳಂತೆ ತಿಂಗಳಿಗೆ ರೂ 20,358 ರೂ., ಅರೆ-ಕುಶಲ ಕೆಲಸಗಾರರು 868 ರೂ. ನಂತೆ ತಿಂಗಳಿಗೆ ರೂ 22,568 ರೂ., ನುರಿತ ಮತ್ತು ಕ್ಲೆರಿಕಲ್ ಕೆಲಸಗಾರರು ದಿನಕ್ಕೆ 954 ರೂ.ನಂತೆ 24,804 ರೂ., ಹೆಚ್ಚು ನುರಿತ ಕೆಲಸಗಾರರು ಅದಕ್ಕಿಂತಲೂ ಹೆಚ್ಚಿನ ವೇತನ ಪಡೆಯಲಿದ್ದಾರೆ.