Minister Sriramulu | ಎಸ್ ಸಿ ಹಾಗೂ ಎಸ್ ಟಿ ಸಮುದಾಗಳ ಮೀಸಲಾತಿ ಹೆಚ್ಚಳ
ಚಾಮರಾಜನಗರ : ಪರಿಶಿಷ್ಟ ಜಾತಿಗೆ ಶೇಕಡಾ 17 ರಷ್ಟು ಮತ್ತು ಪರಿಶಿಷ್ಟ ವರ್ಗಕ್ಕೆ ಶೇಕಡಾ 7.5 ರಷ್ಟು ಮೀಸಲಾತಿ ಕೊಡುವ ಕೆಲಸ ಆದಷ್ಟು ಶೀಘ್ರದಲ್ಲಿಯೇ ನಡೆಯಲಿದೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆದ ಮಾತನಾಡಿದ ಶ್ರೀರಾಮುಲು, ಎಸ್ ಸಿ ಹಾಗೂ ಎಸ್ ಟಿ ಸಮುದಾಯಗಳ ಮೀಸಲಾಯಿಯನ್ನು ಹೆಚ್ಚಿಸುತ್ತೇವೆ.
ಆ ಮೂಲಕ ಸಿಹಿ ಸುದ್ದಿ ಕೊಟ್ಟೇ ಕೊಡುತ್ತೇವೆ. ಈಗ ಹೋರಾಟ ಮಾಡುವವರು ಮುಂದೊಂದು ದಿನ ಕುಣಿದಾಡುವಂತೆ ಬೊಮ್ಮಾಯಿ ಸರ್ಕಾರ ಮಾಡಲಿದೆ.

ನಾನು ನನ್ನ ಸಮೂದಾಯಕ್ಕೆ ನೀಡಿರುವ ಮೀಸಲಾತಿ ಮಾತನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಶೀಘ್ರದಲ್ಲೇ ಸರ್ಕಾರದಿಂದ ಮೀಸಲಾತಿಯನ್ನು ಶೇಕಡಾ ೭.೫ ಹೆಚ್ಚಿಸಲಾಗುವುದು.
ನಾನು ಈ ಪರಿಶಿಷ್ಟ ವರ್ಗಗಳ ಮೊದಲ ಮಂತ್ರಿಯಾಗಿದ್ದು ನನ್ನ ಸಮುದಾಯಕ್ಕೆ ನೀಡಿದ ಎಲ್ಲಾ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರು.
ಕಾಂಗ್ರೆಸ್‌ನವರು ವಿಧಾನಸೌಧದ ಮುಂದೆ ವಾಲ್ಮೀಕಿ ಪುತ್ಥಳಿಯನ್ನು ಮಾಡಿಬಿಟ್ಟು ಬಹಳ ಹಾರಾಡುತ್ತಿದ್ದಾರೆ. ಅವರ ಕೊಡುಗೆ ಪರಿಶಿಷ್ಟ ಪಂಗಡಕ್ಕೆ ಏನೇನು ನೀಡಿಲ್ಲ ಎಂದು ಹರಿಹಾಯ್ದರು.
ಗೋಷ್ಠಿಯಲ್ಲಿ ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಪರಿಮಳ ನಾಗಪ್ಪ, ಕೇಂದ್ರ ಪರಿಹಾರ ನಿಗಮದ ಅದ್ಯಕ್ಷ ಎಂ.ರಾಮಚಂದ್ರ, ಬಿಜೆಪಿ ಜಿಲ್ಲಾ ಅದ್ಯಕ್ಷ ಸುಂದರ್ ಇದ್ದರು..