ಚೀನಾದ ಉತ್ಪನ್ನಗಳ ಬಹಿಷ್ಕಾರದ ಮಧ್ಯೆ ಮೇಡ್ ಇನ್ ಇಂಡಿಯಾ ಆಟಿಕೆಗಳಿಗೆ ಹೆಚ್ಚಿದ ಬೇಡಿಕೆ
ರಾಜ್ ಕೋಟ್, ಜುಲೈ 17: ಜೂನ್ ಮಧ್ಯದಲ್ಲಿ ಗಾಲ್ವಾನ್ ಕಣಿವೆಯ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾದ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ಬಹಿಷ್ಕರಿಸುವ ಅಭಿಯಾನದ ಮಧ್ಯೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ತಯಾರಿಸಿದ ಮೇಡ್ ಇನ್ ಇಂಡಿಯಾ ಆಟಿಕೆಗಳ ಬೇಡಿಕೆ ಹೆಚ್ಚಾಗಿದೆ.
‘ಸುಮಾರು 80 ರಿಂದ 90 ರಷ್ಟು ಆಟಿಕೆಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಪ್ರಸ್ತುತ ಜನರು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿರುವ ಹಿನ್ನಲೆಯಲ್ಲಿ, ಇದು ದೇಶೀಯ ಮಾರುಕಟ್ಟೆಯನ್ನು ಬೆಳೆಸುವ ಅವಕಾಶ ಮತ್ತು ಇತರ ದೇಶಗಳಿಗೆ ರಫ್ತು ಮಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತಿದೆ. ಅಲ್ಲದೇ ಇದು ಭಾರತದ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ‘ಎಂದು ಅದಿತಿ ಟಾಯ್ಸ್‌ನ ಸಹ ನಿರ್ದೇಶಕ ಅರವಿಂದ ಜಲಾ ಎಎನ್‌ಐಗೆ ತಿಳಿಸಿದರು.
“ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ನಾವು 100 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತೇವೆ ಮತ್ತು ಒಂದು ವರ್ಷದಲ್ಲಿ ನಾವು 200 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತೇವೆ, ಇದರಿಂದ ನಾವು ಭಾರತೀಯ ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
ಆಟಿಕೆ ಉದ್ಯಮಿಗಳು ಬಹಳ ಕಡಿಮೆ ಇದ್ದಾರೆ ಎಂದು ಜಲಾ ಅಭಿಪ್ರಾಯಪಟ್ಟಿದ್ದಾರೆ.

ಈ ಸಮಯದಲ್ಲಿ ದೇಶದಲ್ಲಿ ಆಟಿಕೆ ಉದ್ಯಮಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ, ಇದು ಉದ್ಯಮಿಗಳಿಗೆ ಉತ್ತಮ ಅವಕಾಶವಾಗಿದ್ದು ಸ್ಪರ್ಧೆಯೂ ಕಡಿಮೆ ಮತ್ತು ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಇಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳಿವೆ ಎಂದು ಅವರು ಹೇಳಿದರು.
ಆಟಿಕೆ ಕಂಪನಿಯ ಸಹ ನಿರ್ದೇಶಕ ಸುಭಾಷ್ ಜಲ ಮಾತನಾಡಿ, ದೇಶಾದ್ಯಂತ ಚೀನಾ ವಿರೋಧಿ ಚಳುವಳಿಗಳು ನಡೆಯುತ್ತಿರುವುದರಿಂದ ಜನರು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುತ್ತಿದ್ದಾರೆ, ಈ ದಿನಗಳಲ್ಲಿ ಭಾರತ ಉತ್ಪನ್ನಗಳನ್ನು ತಯಾರಿಸಲು ಬೇಡಿಕೆ ಇದೆ.
ಚೀನಾ ವಿರೋಧಿ ಆಂದೋಲನವು ಈ ದಿನಗಳಲ್ಲಿ ಭಾರತ ಉತ್ಪನ್ನಗಳಿಗೆ ಜನರ ಬೇಡಿಕೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.
ಜೂನ್ 15 ರಂದು, ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರು ಇಪ್ಪತ್ತು ಭಾರತೀಯ ಯೋಧರನ್ನು ಹತ್ಯೆ ಮಾಡಿದರು.ಇದು ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆಗೆ ಕಾರಣವಾಯಿತು. ನಂತರ ಚೀನಾದ ಸೈನಿಕರು ಮಿಲಿಟರಿ ಮಟ್ಟ ಮತ್ತು ರಾಜತಾಂತ್ರಿಕ ಮಟ್ಟದ ಮೂಲಕ ಎರಡು ದೇಶಗಳ ನಡುವಿನ ಸಂವಾದಗಳನ್ನು ಅನುಸರಿಸಿ ಹಿಂದಕ್ಕೆ ಸರಿಯಲು ಪ್ರಾರಂಭಿಸಿದರು.








