ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ – ಉಡುಪಿಯ ಹಲವೆಡೆ ಶಾಲೆಗೆ ರಜೆ ಘೋಷಣೆ…
ಕರಾವಳಿ ಜಿಲ್ಲೆ ಉಡುಪಿಯಲ್ಲಿ ಡೆಂಗ್ಯೂ ಭೀತಿ ಹೆಚ್ಚಾಗುತ್ತಿದೆ. ಕುಂದಾಪುರ, ಬೈಂದೂರು ಪ್ರದೇಶಗಳಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿರು ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮಳೆಗಾಲ ಹೆಚ್ಚಾಗುತ್ತಿದ್ದಂತೆ ಡೆಂಗ್ಯೂ ಪ್ರಕರಣ ಹೆಚ್ಚುತ್ತಿರುವ ಗ್ರಾಮಗಳಲ್ಲಿ ಹತ್ತು ದಿನಗಳ ಕಾಲ ಶಾಲೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜಡ್ಕಲ್ ಮದ್ದೂರು ಭಾಗದ ಶಾಲೆಗಳಿಗೆ ರಜೆ ಆದೇಶ ಜಾರಿಯಾಗಲಿದೆ.
ಬೈಂದೂರು ಕ್ಷೇತ್ರದಲ್ಲಿ ಡೆಂಗ್ಯೂ ರೋಗ ಮಿತಿಮೀರಿದೆ. ಬೈಂದೂರು ತಾಲೂಕಿನ ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಮುದೂರು, ಉದಯನಗರ, ಬೀಸಿನಪಾರೆ, ಕಾನ್ಕಿ ಮುಂತಾದೆಡೆ ಡೆಂಗ್ಯೂ ಕಾಣಿಸಿಕೊಂಡಿದೆ. ಇದೇ ಭಾಗದಲ್ಲಿ ಜನವರಿಯಿಂದ ಈವರೆಗೆ 100 ಕ್ಕೂ ಮಿಕ್ಕಿ ಡೆಂಗ್ಯೂ ಜ್ವರ ಪೀಡಿತ ರೋಗಿಗಳ ಪತ್ತೆಯಾಗುವ ಮೂಲಕ ಆತಂಕ ಹೆಚ್ಚಿದೆ.
ಉಡುಪಿ ಜಿಲ್ಲೆ ಯಲ್ಲಿ 152 ಡೆಂಗ್ಯೂ ಪ್ರಕರಣ ಖಚಿತಗೊಂಡಿದೆ.ಈ ವರೆಗೆ 2000ಕ್ಕೂ ಅಧಿಕ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು ಪರೀಕ್ಷೆಗೆ ಒಳಪಡಿಸಲಾಗಿದೆ. ಮುದೂರು ಪರಿಸರದಲ್ಲಿ 105, ಜಡ್ಕಲ್ ನಲ್ಲಿ 6 ಪ್ರಕರಣಗಳು ಖಚಿತವಾಗಿದೆ.ವಕೊಲ್ಲೂರಿ ನಲ್ಲಿ 2 ಪ್ರಕರಣ ದಾಖಲಾಗಿದ.ಉಡುಪಿ ಜಿಲ್ಲೆಯ ಇತರೆಡೆಗಳಲ್ಲಿ 39 ಪ್ರಕರಗಳು ಪತ್ತೆಯಾಗಿದೆ.








