IND TOUR OF WI : ರೆಸ್ಟ್ ಕೊಟ್ರೆ ಫಾರ್ಮ್ ಗೆ ಬರಲ್ಲ
ಜುಲೈ 22 ರಿಂದ ಆರಂಭವಾಗುವ ವಿಂಡೀಸ್ ಟೂರ್ ಗೆ ಟೀಂ ಇಂಡಿಯಾ ಸಿನಿಯರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ ಪ್ರೀತ್ ಬುಮ್ರಾ, ರಿಷಬ್ ಪಂತ್, ಮೊಹ್ಮದ್ ಶಮಿಗೆ ರೆಸ್ಟ್ ನೀಡಲಾಗಿದೆ.
ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಗರಂ ಆಗಿದ್ದಾರೆ.
ಹಿರಿಯ ಆಟಗಾರರಿಗೆ ಸೆಲೆಕ್ಷರ್ ಗಳು ಪದೇ ಪದೇ ರೆಸ್ಟ್ ನೀಡುವುದರ ಬಗ್ಗೆ ಟ್ವಟ್ಟರ್ ನಲ್ಲಿ ಪಠಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ಫಾರ್ಮ್ ಕೊರತೆಯಿಂದಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವಿಂಡೀಸ್ ವಿರುದ್ಧದ ಸರಣಿಯಿಂದ ರೆಸ್ಟ್ ನೀಡಿದ್ದು ಎಷ್ಟು ಸರಿ ಎಂದು ಪರೋಕ್ಷವಾಗಿ ಇರ್ಫಾನ್ ಪ್ರಶ್ನಿಸಿದ್ದಾರೆ.
ರೆಸ್ಟ್ ತೆಗೆದುಕೊಂಡರೇ ಯಾವುದೇ ಆಟಗಾರ ಫಾರ್ಮ್ ಗೆ ಬರೋದಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.

ಇರ್ಫಾನ್ ಟ್ವೀಟ್ ನಲ್ಲಿ ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ ಹೆಸರುಗಳು ಪ್ರಸ್ತಾಪಿಸದೇ ಇದ್ದರೂ ನೆಟ್ಟಿಗರು ಇರ್ಫಾನ್ ವಾದಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ವಿಷಯದಲ್ಲಿ ಇರ್ಫಾನ್ ವಾದ ಕರೆಕ್ಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಇರ್ಫಾನ್ ಟ್ವೀಟ್ ಗೆ ಬೆಂಬಲವಾಗಿ ಭಾರಿ ಪ್ರಚಾರ ನಡೆಯುತ್ತಿದೆ.
ಇರ್ಫಾನ್ ಟ್ವೀಟ್ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಂಡೀಸ್ ವಿರುದ್ದ ಮೂರು ಏಕದಿನ ಸರಣಿಗೆ 16 ಮಂದಿ ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.
ಈ ತಂಡಕ್ಕೆ ಶಿಖರ್ ಧವನ್ ನಾಯಕರಾಗಿದ್ದಾರೆ. ರವೀಂದ್ರ ಜಡೇಜಾ ಉಪನಾಯಕರಾಗಿದ್ದಾರೆ.
ಇನ್ನು ಈ ಸರಣಿಗೆ ಹೊಸ ನಾಯಕನ ಆಯ್ಕೆ ಬಗ್ಗೆ ಕೂಡ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದು, ಸೆಲೆಕ್ಟರ್ ಗಳು ಪದೇ ಪದೇ ನಾಯಕರನ್ನು ಬದಲಿಸುತ್ತಾ ತಂಡವನ್ನ ಸರ್ವನಾಶ ಮಾಡುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ.