ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದ ಟೀಂ ಇಂಡಿಯಾ, ಆ ಮೂಲಕ T20Iನಲ್ಲಿ ಗರಿಷ್ಠ ರನ್-ಚೇಸ್ ಮಾಡುವ ಮೂಲಕ ದಾಖಲೆಯ ಗೆಲುವು ಸಾಧಿಸಿದೆ.
ವಿಶಾಖಪಟ್ಟಣಂನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 208/3 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಜೋಶ್ ಇಂಗ್ಲಿಸ್(110) ಹಾಗೂ ಸ್ವೀವ್ ಸ್ಮಿತ್(52) ತಂಡಕ್ಕೆ ಆಸರೆಯಾದರು. ಈ ಟಾರ್ಗೆಟ್ ಚೇಸ್ ಮಾಡಿದ ಭಾರತ 19.5 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್‌ಗಳಿಸುವ ಮೂಲಕ ಗೆಲುವಿನ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಆಸೀಸ್ ವಿರುದ್ಧದ ಈ ಗೆಲುವು ಟಿ20 ಕ್ರಿಕೆಟ್‌ನಲ್ಲಿ ಭಾರತ ದಾಖಲಿಸಿದ ಗರಿಷ್ಠ ರನ್‌ಗಳ ಚೇಸ್ ಆಗಿದೆ. ಈ ಹಿಂದೆ 2019ರ ಡಿಸೆಂಬರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 208 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ, ಅತ್ಯಧಿಕ ರನ್-ಚೇಸ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ 209 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾ, ಟಿ20ಯಲ್ಲಿ 5ನೇ ಬಾರಿಗೆ 200ಕ್ಕೂ ಹೆಚ್ಚು ಟಾರ್ಗೆಟ್ ಚೇಸ್ ಮಾಡುವಲ್ಲಿ ಯಶಸ್ವಿಯಾಗಿದೆ.
ಭಾರತದ ಯಶಸ್ವಿ ರನ್-ಚೇಸ್-ಟಿ20ಯಲ್ಲಿ
209 vs ಆಸ್ಟ್ರೇಲಿಯಾ, ವಿಶಾಖಪಟ್ಟಣಂ, 2023
208 vs ವೆಸ್ಟ್ ಇಂಡೀಸ್, ಹೈದ್ರಾಬಾದ್, 2019
207 vs ಶ್ರೀಲಂಕಾ, ಮೊಹಾಲಿ, 2009
204 vs ನ್ಯೂಜಿಲೆಂಡ್, ಅಕ್ಲೆಂಡ್, 2020
202 vs ಆಸ್ಟ್ರೇಲಿಯಾ, ರಾಜ್ಕೋಟ್, 2013
ಹೆಚ್ಚು ಬಾರಿ 200 or 200+ ರನ್ ಚೇಸ್ ಮಾಡಿದ ತಂಡಗಳು: ಟಿ20ಯಲ್ಲಿ
5 – ಭಾರತ
4 – ದಕ್ಷಿಣ ಆಫ್ರಿಕಾ
3 – ಪಾಕಿಸ್ತಾನ
3 – ಆಸ್ಟ್ರೇಲಿಯಾ
IND v AUS, Team India, Australia, Suryakumar Yadav, T20I Series