ಟೀಮ್ ಇಂಡಿಯಾದ ಯುವ ವೇಗದ ಬೌಲರ್ ಪ್ರಸಿದ್ಧ ಕೃಷ್ಣ, ಟಿ20 ಕ್ರಿಕೆಟ್‌ನಲ್ಲಿ ಬೇಡದ ದಾಖಲೆಯೊಂದನ್ನ ಬರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ ದುಬಾರಿ ರನ್ ನೀಡುವ ಮೂಲಕ ಭಾರತದ ಪರವಾಗಿ ಟಿ20ಯಲ್ಲಿ ಹೆಚ್ಚು ರನ್ ನೀಡಿದ ಬೌಲರ್ ಎನಿಸಿಕೊಂಡರು. ಗುವಾಹತಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ, 4 ಓವರ್‌ಗಳಲ್ಲಿ ಬರೋಬ್ಬರಿ 68 ರನ್‌ಗಳನ್ನ ನೀಡುವ ಮೂಲಕ ಅತ್ಯಂತ ದುಬಾರಿ ಬೌಲರ್ ಎನಿಸಿದರು.
ಪಂದ್ಯದಲ್ಲಿ ತಾವು ಮಾಡಿದ ಮೊದಲ ಓವರ್‌ನಲ್ಲಿ 16 ರನ್‌ಗಳನ್ನ ನೀಡಿದ ಪ್ರಸಿದ್ಧ ಕೃಷ್ಣ, 2ನೇ ಓವರ್‌ನಲ್ಲಿ ಬರೋಬ್ಬರಿ 23 ರನ್‌ಗಳನ್ನ ನೀಡಿದರು. ಆದರೆ 3ನೇ ಓವರ್‌ನಲ್ಲಿ ಉತ್ತಮ ಕಮ್‌ಬ್ಯಾಕ್ ಮಾಡಿದ ಅವರು, ಕೇವಲ 6 ರನ್‌ಗಳನ್ನ ಬಿಟ್ಟುಕೊಟ್ಟರು. ಆದರೆ ರೋಚಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 6 ಬಾಲ್‌ಗಳಲ್ಲಿ 21 ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಇನ್ನಿಂಗ್ಸ್‌ನ 20ನೇ ಹಾಗೂ ತಮ್ಮ 4ನೇ ಓವರ್ ಬೌಲಿಂಗ್ ಮಾಡಿದ ಕರ್ನಾಟಕದ ಆಟಗಾರ, ಮತ್ತೊಮ್ಮೆ 23 ರನ್‌ಗಳು(4 1 6 4 4 4) ರನ್‌ಗಳನ್ನ ನೀಡಿ ನಿರಾಸೆ ಮೂಡಿಸಿದರು.
ಅಭಿಮಾನಿಗಳ ಟೀಕೆ:
ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ದುಬಾರಿ ಬೌಲಿಂಗ್ ಪ್ರದರ್ಶನ ನೀಡಿದ ಪ್ರಸಿದ್ಧ ಕೃಷ್ಣ ಅವರ ಪ್ರದರ್ಶನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಯುವ ವೇಗದ ಬೌಲರ್ ಪ್ರದರ್ಶನವನ್ನ ಕೆಲವು ಅಭಿಮಾನಿಗಳು ತಮ್ಮ ಶೈಲಿಯಲ್ಲಿ ಟೀಕಿಸಿದ್ದರೆ. ಇನ್ನೂ ಕೆಲವರು ಈ ಪ್ರದರ್ಶನದ ಮೂಲಕ ಪ್ರಸಿದ್ಧ ಕೃಷ್ಣ ಅವರ ಕ್ರಿಕೆಟ್ ಪಯಣದ ಬಗ್ಗೆ ಕಳವಳ ಕೂಡ ವ್ಯಕ್ತಪಡಿಸಿದ್ದಾರೆ.
IND v AUS, Prasidh Krishna, Team India, Australia, T20I Cricket