ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಆ ಮೂಲಕ ಏಕದಿನ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಹೆಚ್ಚು ರನ್‌ಗಳಿಸಿದ ನಾಯಕ ಎನಿಸಿಕೊಂಡಿದ್ದಾರೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್‌ನ ಮೂಲಕ ಎದುರಾಳಿ ತಂಡಗಳ ಮೇಲೆ ಪ್ರಾಬಲ್ಯ ಮೆರೆದಿದ್ದ ಹಿಟ್‌ಮ್ಯಾನ್ ರೋಹಿತ್ ಶರ್ಮಾ, ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಕೂಡ ಆಸೀಸ್ ವಿರುದ್ಧ ಸ್ಪೋಟಕ ಬ್ಯಾಟಿಂಗ್ ಮೂಲಕ 47 ರನ್‌ಗಳಿಸಿ ಮಿಂಚಿದರು. ಆದರೆ ಅರ್ಧಶತಕದ ಹೊಸ್ತಿಲಲ್ಲಿ ಎಡವಿದ ಟೀಂ ಇಂಡಿಯಾ ನಾಯಕ, ಏಕದಿನ ವಿಶ್ವಕಪ್‌ನ ಒಂದು ಆವೃತ್ತಿಯಲ್ಲಿ ಹೆಚ್ಚು ರನ್‌ಗಳಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
ತಮ್ಮ ಈ ಇನ್ನಿಂಗ್ಸ್‌ನೊಂದಿಗೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರ ದಾಖಲೆಯನ್ನು ಮುರಿದರು. ಈ ಹಿಂದೆ 2019ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಕೇನ್ ವಿಲಿಯಮ್ಸನ್ 578 ರನ್‌ಗಳನ್ನ ಕಲೆಹಾಕಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚಿದ ರೋಹಿತ್ ಶರ್ಮಾ, ಆಡಿರುವ 11 ಪಂದ್ಯಗಳಲ್ಲಿ 54.27ರ ಸರಾಸರಿ ಹಾಗೂ 125.94ರ ಸ್ಟ್ರೈಕ್ ರೇಟ್‌ನೊಂದಿಗೆ 597 ರನ್‌ಗಳಿಸಿದ್ದಾರೆ. ಹಿಟ್‌ಮ್ಯಾನ್ ಅವರ ಈ ಇನ್ನಿಂಗ್ಸ್‌ನಲ್ಲಿ 3 ಅರ್ಧಶತಕ ಹಾಗೂ 1 ಶತಕ ಒಳಗೊಂಡಿದೆ.
ಗೇಯ್ಲ್ ರೆಕಾರ್ಡ್ ಮುರಿದ ಹಿಟ್‌ಮ್ಯಾನ್:
ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ, ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಸಿಕ್ಸರ್‌ಗಳನ್ನ ಬಾರಿಸುವಲ್ಲಿ ಕ್ರಿಸ್ ಗೇಯ್ಲ್ ದಾಖಲೆ ಮುರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ 3 ಸಿಕ್ಸರ್‌ಗಳನ್ನ ಬಾರಿಸಿದ ಹಿಟ್‌ಮ್ಯಾನ್ ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 86ನೇ ಸಿಕ್ಸರ್ ಸಿಡಿಸಿದರು. ಆ ಮೂಲಕ ಕ್ರಿಸ್ ಗೇಯ್ಲ್ ಅವರ 85 ಸಿಕ್ಸರ್‌ಗಳ ದಾಖಲೆ ಹಿಂದಿಕ್ಕಿದರು. ರೋಹಿತ್ ಶರ್ಮಾ ಹಾಗೂ ಕ್ರಿಸ್ ಗೇಯ್ಲ್ ನಂತರದಲ್ಲಿ ಮಾಜಿ ಕ್ರಿಕೆಟಿಗರಾದ ಶಾಹಿದ್ ಅಫ್ರಿದಿ(63 ಸಿಕ್ಸ್ v ಶ್ರೀಲಂಕಾ) ಹಾಗೂ ಸನತ್ ಜಯಸೂರ್ಯ(53 ಸಿಕ್ಸ್ v ಪಾಕಿಸ್ತಾನ) ಅವರುಗಳಿದ್ದಾರೆ.
2500 ರನ್‌ಗಳ ಪೂರೈಕೆ:
ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ 47 ರನ್‌ಗಳನ್ನ ಬಾರಿಸಿದ ರೋಹಿತ್ ಶರ್ಮಾ, ಆ ಮೂಲಕ ವಿಶ್ವಕಪ್‌ನಲ್ಲಿ 2500 ರನ್‌ಗಳನ್ನ ಪೂರೈಸಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಆಡಿರುವ 67 ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 2538 ರನ್‌ಗಳಿದ್ದಾರೆ. ಇವರ ಈ ಇನ್ನಿಂಗ್ಸ್‌ನಲ್ಲಿ ಏಳು ಶತಕಗಳು ಮತ್ತು 15 ಅರ್ಧಶತಕಗಳಿವೆ. ರೋಹಿತ್ ಅವರಿಗೂ ಮುನ್ನ ವಿರಾಟ್ ಕೊಹ್ಲಿ, ವಿಶ್ವಕಪ್‌ನಲ್ಲಿ 2500 ರನ್‌ಗಳನ್ನ ಪೂರೈಸಿದ್ದಾರೆ.
IND v AUS, Team India, Australia, Rohit Sharma, World Cup Final