ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭರ್ಜರಿ ಬ್ಯಾಟಿಂಗ್ನಿಂದ ಮಿಂಚಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್(137) ತಂಡದ ಗೆಲುವಿನ ಹೀರೋ ಆಗಿ ಮಿಂಚಿದರು. ಅಲ್ಲದೇ ತಮ್ಮ ಈ ಪ್ರದರ್ಶನದ ಮೂಲಕ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಶತಕ ಸಿಡಿಸಿದ ಆಸೀಸ್ನ 3ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು.
ಅಹ್ಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಟ್ರಾವಿಡ್ ಹೆಡ್, ಭರ್ಜರಿ ಶತಕ ಸಿಡಿಸುವ ಮೂಲಕ ಆಸೀಸ್ ತಂಡಕ್ಕೆ 6 ವಿಕೆಟ್ಗಳ ಗೆಲುವು ತಂದುಕೊಟ್ಟರು. ಈ ಶತಕದೊಂದಿಗೆ ರಿಕಿ ಪಾಂಟಿಂಗ್, ಆಡಮ್ ಗಿಲ್ಕ್ರಿಸ್ಟ್ ಅವರ ನಂತರದಲ್ಲಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಆಸ್ಟ್ರೇಲಿಯಾ ತಂಡದ ಮೂರನೇ ಆಟಗಾರ ಎನಿಸಿದರು. ಅಲ್ಲದೇ ವಿಶ್ವಕಪ್ ಫೈನಲ್ನಲ್ಲಿ ಶತಕ ಬಾರಿಸಿದ ವಿಶ್ವದ 7ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಪಡೆದರು.
ಟ್ರಾವಿಸ್ ಹೆಡ್ ಅವರಿಗೂ ಮುನ್ನ 2003ರಲ್ಲಿ ಅಂದಿನ ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್ ಆಗಿದ್ದ ರಿಕಿ ಪಾಂಟಿಂಗ್ 2003ರ ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಭರ್ಜರಿ ಶತಕ ಬಾರಿಸಿ ಆಸೀಸ್ ತಂಡಕ್ಕೆ ವಿಶ್ವಕಪ್ ಪ್ರಶಸ್ತಿ ತಂದುಕೊಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಇದಾದ ನಂತರ 2007ರ ವಿಶ್ವಕಪ್ನಲ್ಲಿ ವಿಕೆಟ್-ಕೀಪರ್ ಬ್ಯಾಟರ್ ಆಡಮ್ ಗಿಲ್ಕ್ರಿಸ್ಟ್, ಶ್ರೀಲಂಕಾ ವಿರುದ್ಧ ಅದ್ಭುತ ಶತಕ ಸಿಡಿಸಿ ಆಸ್ಟ್ರೇಲಿಯಾ ತಂಡದ ಹೀರೋ ಆಗಿದ್ದರು. ಇವರಿಬ್ಬರ ನಂತರದಲ್ಲಿ ಇದೀಗ ಟ್ರಾವಿಸ್ ಹೆಡ್, ವಿಶ್ವಕಪ್ ಫೈನಲ್ನಲ್ಲಿ ಶತಕ ಸಿಡಿಸಿದ್ದಾರೆ.
ಈ ಮೂವರು ಆಸ್ಟ್ರೇಲಿಯಾ ಆಟಗಾರರ ಹೊರತಾಗಿ ವಿವ್ ರಿಚರ್ಡ್ಸ್ (1979ರಲ್ಲಿ ಇಂಗ್ಲೆಂಡ್ ವಿರುದ್ಧ 138*), ಅರವಿಂದ ಡಿಸಿಲ್ವಾ (1996ರಲ್ಲಿ ಆಸ್ಟ್ರೇಲಿಯಾ ವಿರುದ್ಧ 107), ಮಹೇಲ ಜಯವರ್ಧನೆ (2011ರಲ್ಲಿ ಭಾರತದ ವಿರುದ್ಧ 103) ಮತ್ತು ಕ್ಲೈವ್ ಲಾಯ್ಡ್ (1975ರಲ್ಲಿ ಆಸ್ಟ್ರೇಲಿಯಾ ವಿರುದ್ಧ 102) ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.
IND v AUS, Team India, Australia, Travis Head, ODI World Cup