ಏಕದಿನ ವಿಶ್ವಕಪ್-2023 ಟೂರ್ನಿಯಲ್ಲಿ ಭಾರತದ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮಿಂಚಿದ ನ್ಯೂಜಿ಼ಲೆಂಡ್ ತಂಡದ ಪ್ರಮುಖ ಬ್ಯಾಟರ್ ಡೆರಿಲ್ ಮಿಚೆಲ್, ಆ ಮೂಲಕ ಕಿವೀಸ್ ತಂಡದ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ ಅವರ ವಿಶ್ವಕಪ್ ದಾಖಲೆ ಮುರಿದಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ಪರ ಜವಾಬ್ದಾರಿಯ ಬ್ಯಾಟಿಂಗ್ ಪ್ರದರ್ಶಿಸಿದ ಮಿಚೆಲ್, ಭರ್ಜರಿ ಶತಕ ಸಿಡಿಸಿ ಚೇಸಿಂಗ್‌ನಲ್ಲಿ ತಂಡಕ್ಕೆ ಆಸರೆಯಾದರು. ಟೀಂ ಇಂಡಿಯಾದ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಮಿಚೆಲ್, ಬೌಂಡರಿ ಹಾಗೂ ಸಿಕ್ಸ್‌ಗಳ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಆ ಮೂಲಕ ಏಕದಿನ ವಿಶ್ವಕಪ್‌ನ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಪರವಾಗಿ ಹೆಚ್ಚು ಸಿಕ್ಸರ್‌ಗಳನ್ನ ಸಿಡಿಸಿದ ಬ್ಯಾಟರ್ ಎನಿಸಿದರು.
ಆ ಮೂಲಕ 2015ರ ಏಕದಿನ ವಿಶ್ವಕಪ್‌ನಲ್ಲಿ ಬ್ರೆಂಡನ್ ಮೆಕ್ಕಲಂ 17 ಸಿಕ್ಸ್‌ಗಳನ್ನ ಬಾರಿಸುವ ಮೂಲಕ ಕಿವೀಸ್ ಪರ ವಿಶ್ವಕಪ್ ಆವೃತ್ತಿಯಲ್ಲಿ ಹೆಚ್ಚು ಸಿಕ್ಸ್‌ಗಳನ್ನ ಬಾರಿಸಿದ ಬ್ಯಾಟರ್ ಎನಿಸಿದ್ದರು. ಆದರೆ ಭಾರತದ ವಿರುದ್ಧ ಸ್ಪೋಟಕ ಬ್ಯಾಟಿಂಗ್‌ನಿಂದ 85 ಬಾಲ್‌ಗಳಲ್ಲಿ ಶತಕ ಸಿಡಿಸಿದ ಮಿಚೆಲ್, ತಮ್ಮ ಇನ್ನಿಂಗ್ಸ್‌ನಲ್ಲಿ 6* ಸಿಕ್ಸ್‌ಗಳನ್ನ ಬಾರಿಸಿದರಲ್ಲದೇ 2023ರ ವಿಶ್ವಕಪ್‌ನಲ್ಲಿ 21* ಸಿಕ್ಸ್‌ಗಳನ್ನ ಬಾರಿಸಿ ಮಿಂಚಿದರು.
IND v NZ, New Zealand, Daryl Mitchell, ODI Cricket, World Cup