ವಿರಾಟ್ ಕೊಹ್ಲಿ(117) ಹಾಗೂ ಶ್ರೇಯಸ್ ಅಯ್ಯರ್(105) ಅವರುಗಳ ಭರ್ಜರಿ ಶತಕ ಹಾಗೂ ಇತರೆ ಬ್ಯಾಟ್ಸ್‌ಮನ್‌ಗಳ ಅದ್ಭುತ ಬ್ಯಾಟಿಂಗ್‌ನ ಮೂಲಕ ಅಬ್ಬರಿಸಿದ ಟೀಂ ಇಂಡಿಯಾ, ಏಕದಿನ ವಿಶ್ವಕಪ್-2023 ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿ಼ಲೆಂಡ್ ವಿರುದ್ಧ 397 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ.
ಮುಂಬೈನ ಐತಿಹಾಸಿಕ ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮ(47) ಹಾಗೂ ಶುಭ್ಮನ್ ಗಿಲ್(79) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದ ಬಿರುಸಿನ ಆಟವಾಡಿದ ಈ ಜೋಡಿ ಮೊದಲ ವಿಕೆಟ್‌ಗೆ 8.2 ಓವರ್‌ಗಳಲ್ಲಿ 71 ರನ್‌ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮ(47) ರನ್‌ಗಳಿಸಿ ಔಟಾದರೆ. ಶುಭ್ಮನ್ ಗಿಲ್(80*) ರಿಟರ್ಡ್ ಹರ್ಟ್ ಮೂಲಕ ಪೆವಿಲಿಯನ್‌ಗೆ ಹಿಂದಿರುಗಿದರು.

ಕೊಹ್ಲಿ-ಶ್ರೇಯಸ್ ಅಬ್ಬರ:
ಈ ಹಂತದಲ್ಲಿ 3ನೇ ವಿಕೆಟ್‌ಗೆ ಜೊತೆಯಾದ ವಿರಾಟ್ ಕೊಹ್ಲಿ(117 ರನ್, 113 ಬಾಲ್, 9 ಬೌಂಡರಿ, 2 ಸಿಕ್ಸ್) ಹಾಗೂ ಶ್ರೇಯಸ್ ಅಯ್ಯರ್(105 ರನ್, 70 ಬಾಲ್, 4 ಬೌಂಡರಿ, 8 ಸಿಕ್ಸ್) ಕಿವೀಸ್ ಬೌಲರ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 50ನೇ ದಾಖಲೆ ಸಿಡಿಸಿ ಇತಿಹಾಸ ಬರೆದರೆ. ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 5ನೇ ಶತಕ ದಾಖಲಿಸಿ ಅಬ್ಬರಿಸಿದರು. ಅಲ್ಲದೇ ಈ ಇಬ್ಬರು 3ನೇ ವಿಕೆಟ್‌ಗೆ 256 ರನ್‌ಗಳ ಅತ್ಯುತ್ತಮ ಜೊತೆಯಾಟದ ಮೂಲಕ ತಂಡದ ಮೊತ್ತವನ್ನ 300ರ ಗಡಿದಾಟಿಸುವಲ್ಲಿ ಯಶಸ್ವಿಯಾದರು.

ಇವರಿಬ್ಬರು ಔಟಾದ ಬಳಿಕ ಕಣಕ್ಕಿಳಿದ ಕನ್ನಡಿಗ ಕೆಎಲ್ ರಾಹುಲ್(39* ರನ್, 20 ಬಾಲ್, 5 ಬೌಂಡರಿ, 2 ಸಿಕ್ಸ್) ಸ್ಪೋಟಕ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರು. ಉಳಿದಂತೆ ಸೂರ್ಯಕುಮಾರ್(1) ನಿರಾಸೆ ಮೂಡಿಸಿದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 397 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕಿವೀಸ್ ಪರ ಟಿಮ್ ಸೌಥಿ 3 ಹಾಗೂ ಟ್ರೆಂಟ್ ಬೋಲ್ಟ್ 1 ವಿಕೆಟ್ ಪಡೆದರು. ಬ್ಯಾಟ್ಸ್‌ಮನ್‌ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ 50 ಓವರ್‌ಗಳಲ್ಲಿ 398 ರನ್‌ಗಳ ಕಠಿಣ ಟಾರ್ಗೆಟ್ ನೀಡಿದೆ.
IND v NZ, Virat Kohli, Team India, Shreyas Iyer, ODI World Cup