ADVERTISEMENT
Wednesday, October 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರೀಡೆ

IND v NZ ODI Series : ರೋಹಿತ್‌-ಗಿಲ್‌ ಶತಕದ ಅಬ್ಬರ  

Namratha Rao by Namratha Rao
January 25, 2023
in ಕ್ರೀಡೆ, News, Newsbeat, Sports
rohith shubhmangill team india
Share on FacebookShare on TwitterShare on WhatsappShare on Telegram

IND v NZ ODI Series : ರೋಹಿತ್‌-ಗಿಲ್‌ ಶತಕದ ಅಬ್ಬರ

ಆರಂಭಿಕರಾದ ರೋಹಿತ್‌ ಶರ್ಮ(101) ಹಾಗೂ ಶುಭ್ಮನ್‌ ಗಿಲ್‌(112) ಅವರ ಬೊಂಬಾಟ್‌ ಬ್ಯಾಟಿಂಗ್‌ ಮತ್ತು ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ನ್ಯೂಜಿ಼ಲೆಂಡ್‌ ವಿರುದ್ಧದ 3ನೇ ODI ಪಂದ್ಯದಲ್ಲಿ ಭಾರತ 90 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನ ಕ್ಲೀನ್‌ ಸ್ವೀಪ್‌ ಮಾಡಿತು.

Related posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು, ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿಕೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

October 6, 2026
parks-land-use-bill-withdrawn-bjp-victory-r-ashoka-seven-day-assembly

ರೈತರ ಸಂಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ: ಕೇಂದ್ರದ ಬರ ಅಧ್ಯಯನ ತಂಡಕ್ಕೆ ಬಿಜೆಪಿ ಮನವಿ : ಪ್ರತಿಪಕ್ಷ ನಾಯಕ ಆರ್.ಅಶೋಕ

October 6, 2026

ಇಂಧೋರ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲ ಬ್ಯಾಟ್‌ ಮಾಡುವ ಅವಕಾಶ ಪಡೆದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 385 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಈ ಕಠಿಣ ಸವಾಲು ಬೆನ್ನತ್ತಿದ ನ್ಯೂಜಿ಼ಲೆಂಡ್‌, ಆರಂಭಿಕ ಆಟಗಾರ ಡೆವೊನ್‌ ಕಾನ್ವೇ(138) ಏಕಾಂಗಿ ಹೋರಾಟದ ನಡುವೆಯೂ 41.2 ಓವರ್‌ಗಳಲ್ಲಿ 295 ರನ್‌ಗಳಿಸಿ ಆಲೌಟ್‌ ಆಗುವ ಮೂಲಕ 90 ರನ್‌ಗಳ ಸೋಲು ಕಂಡಿತು. ಅಲ್ಲದೇ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿತು.

ರೋಹಿತ್‌-ಗಿಲ್‌ ಅಬ್ಬರ:

ಮೊದಲು ಬ್ಯಾಟ್‌ ಮಾಡಿದ ಭಾರತಕ್ಕೆ ಆರಂಭಿಕರಾದ ರೋಹಿತ್‌ ಶರ್ಮ ಹಾಗೂ ಶುಭ್ಮನ್‌ ಗಿಲ್‌ ಅದ್ಭುತ ಆರಂಭ ನೀಡಿದರು. ಕಿವೀಸ್‌ ಬೌಲಿಂಗ್‌ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ ಮೊದಲ ವಿಕೆಟ್‌ 212 ರನ್‌ಗಳ ಜೊತೆಯಾಟದ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ ನಾಯಕ ರೋಹಿತ್‌ ಶರ್ಮ(101) ODI ಕ್ರಿಕೆಟ್‌ನಲ್ಲಿ 30ನೇ ಶತಕ ದಾಖಲಿಸಿದರೆ. ಶುಭ್ಮನ್‌ ಗಿಲ್‌(112) ತಮ್ಮ ನಾಲ್ಕನೇ ಶತಕ ಸಿಡಿಸಿ ಸಂಭ್ರಮಿಸಿದರು.

ಒಂದು ಹಂತದಲ್ಲಿ 400ಕ್ಕೂ ಅಧಿಕ ಮೊತ್ತ ಕಲೆಹಾಕುವ ಅವಕಾಶ ಹೊಂದಿದ್ದ ಭಾರತ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪರಿಣಾಮ ಆರಂಭಿಕರ ವಿಕೆಟ್‌ ಪತನದ ಬಳಿಕ ಬಂದ ವಿರಾಟ್‌ ಕೊಹ್ಲಿ(36), ಇಶಾನ್‌ ಕಿಶನ್‌(17), ಸೂರ್ಯಕುಮಾರ್‌(14) ತಂಡಕ್ಕೆ ಆಸರೆಯಾಗಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಬಂದ ಹಾರ್ದಿಕ್‌ ಪಾಂಡ್ಯ(54) ಅರ್ಧಶತಕದ ಮೂಲಕ ತಂಡದ ಮೊತ್ತವನ್ನ 380ರ ಗಡಿದಾಟಿಸಿದರು. ಇವರಿಗೆ ಶಾರ್ದೂಲ್‌ ಥಾಕೂರ್‌(25) ಉಪಯುಕ್ತ ಕಾಣಿಕೆ ನೀಡಿದರು. ಕಿವೀಸ್‌ ಪರ ಜೇಕಬ್‌ ಡಫಿ ಹಾಗೂ ಟಿಕ್ನರ್‌ ತಲಾ 3 ವಿಕೆಟ್‌ ಪಡೆದರು.

ಕಾನ್ವೇ ಏಕಾಂಗಿ ಹೋರಾಟ

ಭಾರತ ನೀಡಿದ 386 ರನ್‌ಗಳ ಸವಾಲಿನ ಮೊತ್ತ ಚೇಸ್‌ ಮಾಡಿದ ಕಿವೀಸ್‌ ಆರಂಭಿಕ ಆಘಾತ ಕಂಡಿತು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಫಿನ್‌ ಅಲೆನ್‌(0) ಪೆವಿಲಿಯನ್‌ ಸೇರಿದರು. ಆದರೆ ನಂತರದಲ್ಲಿ ಜೊತೆಯಾದ ಡೆವೋನ್‌ ಕಾನ್ವೇ(138) ಹಾಗೂ ಹೆನ್ರಿ ನಿಕೋಲ್ಸ್‌(42) ತಂಡಕ್ಕೆ ಚೇತರಿಕೆ ನೀಡಿದರು. ಜವಾಬ್ದಾರಿಯ ಆಟವಾಡಿದ ಕಾನ್ವೇ, ಭರ್ಜರಿ ಶತಕ ಸಿಡಿಸಿ ಮಿಂಚಿದರು.

ಆದರೆ ಇವರು ಔಟಾದ ಬಳಿಕ ಬಂದ ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯ ಆಟವಾಡದ ಪರಿಣಾಮ ಕಿವೀಸ್‌ 295 ರನ್‌ಗಳಿಗೆ ಆಲೌಟ್‌ ಆಯಿತು. ಭಾರತದ ಪರ ಶಾರ್ದೂಲ್‌ ಥಾಕೂರ್‌, ಕುಲ್ದೀಪ್‌ ಯಾದವ್‌ ತಲಾ 3 ವಿಕೆಟ್‌ ಪಡೆದರೆ. ಯುಜ್ವೇಂದ್ರ ಚಹಲ್‌ 2, ಪಾಂಡ್ಯ ಮತ್ತು ಮಲ್ಲಿಕ್‌ ತಲಾ 1 ವಿಕೆಟ್‌ ಪಡೆದರು.

ಮೂರನೇ ODIನಲ್ಲಿ ಆಲ್ರೌಂಡ್‌ ಪ್ರದರ್ಶನ ನೀಡಿದ ಶಾರ್ದೂಲ್‌ ಥಾಕೂರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ. ಮೂರು ಪಂದ್ಯಗಳ ಸರಣಿಯಲ್ಲಿ ದ್ವಿಶತಕ ಹಾಗೂ ಒಂದು ಶತಕದೊಂದಿಗೆ ಮಿಂಚಿದ ಆರಂಭಿಕ ಬ್ಯಾಟ್ಸ್‌ಮನ್‌ ಶುಭ್ಮನ್‌ ಗಿಲ್‌ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

IND v NZ ODI Series , Rohith Sharma , Shubmangil , saakshatv

Tags: #saakshatvIND v NZ ODI Series
ShareTweetSendShare
Join us on:

Related Posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು, ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿಕೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
October 6, 2026
0

ಬೆಂಗಳೂರು,  ಎಸ್‌ಐಆರ್‌ ವಿಚಾರದಲ್ಲಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕ್ರಮ ವಹಿಸುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹಾಗೂ ಬಿಜೆಪಿ ಮುಖಂಡರು ರಾಜ್ಯಪಾಲ ಥಾವರ್‌...

parks-land-use-bill-withdrawn-bjp-victory-r-ashoka-seven-day-assembly

ರೈತರ ಸಂಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ: ಕೇಂದ್ರದ ಬರ ಅಧ್ಯಯನ ತಂಡಕ್ಕೆ ಬಿಜೆಪಿ ಮನವಿ : ಪ್ರತಿಪಕ್ಷ ನಾಯಕ ಆರ್.ಅಶೋಕ

by admin
October 6, 2026
0

ಬೆಂಗಳೂರು, ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, 50%ಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಸರಿಯಾದ ಸಮಯಕ್ಕೆ ಮಳೆಯಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಕಡೆ ಕುಡಿಯುವ ನೀರಿಗೂ ಹಾಹಾಕಾರ...

shivarajkumar-flash-blast-incident-chitradurga-bail-movie-promotion

ಹ್ಯಾಟ್ರಿಕ್ ಹೀರೋ ಶಿವಣ್ಣ ಸುರಕ್ಷಿತ : ಅಭಿಮಾನಿಗಳಿಗೆ ನೆಮ್ಮದಿ. ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ

by admin
October 6, 2026
0

ನಟ ಶಿವಣ್ಣನ ಮೇಲೆ ಸಿಡಿದ ಫ್ಲಾಶ್ ಬ್ಲಾಸ್ಟ್..! ಚಿತ್ರದುರ್ಗದ ಅಹೋಬಲ ಟಿವಿಎಸ್ ಶೋರೂಂನಲ್ಲಿ ಭೀಕರ ಅವಘಡ ಚಿತ್ರದುರ್ಗ: ಬೇಲ್ ಸಿನಿಮಾ ಪ್ರಮೋಷನ್‌ಗಾಗಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಖ್ಯಾತ...

ಕಿರುತೆರೆ ‘ರಾಮಾಯಣ’ದ ರಾವಣ  ಇನ್ನಿಲ್ಲ

ʻಆ್ಯಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಹೊಸ ಅವತಾರ; ಪೀಪಲ್ ಮೀಡಿಯಾ ಫ್ಯಾಕ್ಟರಿ ಜೊತೆ ಲವ್‌ & ಫ್ಯಾಮಿಲಿ ಎಮೋಷನ್ಸ್‌ ಇರುವ ‘ಕೆಮಿಸ್ಟ್ರಿ’ ಚಿತ್ರ ಘೋಷಣೆ, ನಾಯಕಿಯಾಗಿ ನಭಾ ನಟೇಶ್‌!

by admin
October 6, 2026
0

ಬೆಂಗಳೂರು: ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ಹೊಚ್ಚ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಮುಂದಿನ ಚಿತ್ರಕ್ಕೆ ‘ಕೆಮಿಸ್ಟ್ರಿ’...

pandavapura-free-health-camp-darshan-puttannaiah-october-8]

ಪಾಂಡವಪುರದಲ್ಲಿ ಅಕ್ಟೋಬರ್ 8 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

by admin
October 6, 2026
0

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನದಲ್ಲಿ ಆಯೋಜನೆ ಪುಟ್ಟಣ್ಣಯ್ಯ ಫೌಂಡೇಶನ್, ರೋಟರಿ ಕ್ಲಬ್ ಆಫ್ ಬೆಂಗಳೂರು ಜಂಕ್ಷನ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗ ಪಾಂಡವಪುರ: ಸಮಾಜದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram