IND v SL 2023: ಮೊದಲ T20I ಪಂದ್ಯ , ವಾಸಿಂ ಜಾಫರ್ ಪ್ಲೇಯಿಂಗ್ ಇಲೆವೆನ್..!!
ಅತಿಥೇಯ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ T20I ಪಂದ್ಯ ಇಂದು ನಡೆಯಲಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯಕ್ಕಾಗಿ ಎರಡು ತಂಡಗಳು ಸಜ್ಜಾಗಿವೆ.
ಮೊದಲ ಟಿ20 ಪಂದ್ಯದ ಹಿನ್ನೆಲೆಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್, ಟೀಂ ಇಂಡಿಯಾದ ತಮ್ಮ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಿದ್ದಾರೆ.
ಮೊದಲ ಟಿ20 ಪಂದ್ಯದ ಪ್ಲೇಯಿಂಗ್ ಇಲೆವೆನ್ ಕುರಿತು ತಮ್ಮ ಸಂಭಾವ್ಯ ತಂಡವನ್ನ ಆಯ್ಕೆ ಮಾಡಿರುವ ವಾಸಿಂ ಜಾಫರ್, ಶುಭ್ಮನ್ ಗಿಲ್ ಹಾಗೂ ಇಶಾನ್ ಕಿಶನ್ ಅವರನ್ನ ಆರಂಭಿಕರಾಗಿ ಆಯ್ಕೆ ಮಾಡಿದ್ದಾರೆ.
ಇಶಾನ್ ಕಿಶನ್ ಈಗಾಗಲೇ ಟಿ20 ಪಂದ್ಯಗಳನ್ನ ಆಡಿದ ಅನುಭವ ಹೊಂದಿದ್ದು, ಗಿಲ್ ಅವರನ್ನ ಓಪನರ್ ಆಗಿ ಆಡಿಸಲು ವಾಸಿಂ ಸಲಹೆ ನೀಡಿದ್ದಾರೆ.
ಉಳಿದಂತೆ ಉಪ ನಾಯಕ ಸೂರ್ಯ ಕುಮಾರ್ ಯಾದವ್, ಸಂಜೂ ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ದೀಪಕ್ ಹೂಡ ಹಾಗೂ ವಾಷಿಂಗ್ಟನ್ ಸುಂದರ್ ಅವರನ್ನ ವಾಸಿಂ ಜಾಫರ್ ತಮ್ಮ ತಂಡದಲ್ಲಿ ಆಯ್ಕೆ ಮಾಡಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಹರ್ಷಲ್ ಪಟೇಲ್, ಅರ್ಶದೀಪ್ ಸಿಂಗ್ ಹಾಗೂ ಯುಜ್ವೇಂದ್ರ ಚಹಲ್ ಅವರನ್ನ ತಮ್ಮ ಪ್ಲೇಯಿಂಗ್ ಇಲೆವೆನ್‌ನಲ್ಲಿ ಗುರುತಿಸಿದ್ದಾರೆ.
ಆದರೆ ಯುವ ಬೌಲರ್‌ಗಳಾದ ಉಮ್ರಾನ್ ಮಲ್ಲಿಕ್, ಶಿವಂ ಮಾವಿ ಹಾಗೂ ಮುಖೇಶ್ ಕುಮಾರ್ ಅವರು ಜಾಫರ್ ಅವರ ತಂಡದಲ್ಲಿ ಕಾಣಿಸಿಕೊಂಡಿಲ್ಲ.
ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಹಾರ್ದಿಕ್ ಪಾಂಡ್ಯ ತಂಡವನ್ನ ಮುನ್ನಡೆಸಲಿದ್ದಾರೆ.
ಎರಡು ತಂಡಗಳು ಕೊನೆಯ ಬಾರಿ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಸೂಪರ್-4 ಹಂತದಲ್ಲಿ ಲಂಕಾ ವಿರುದ್ಧ ಸೋಲು ಕಂಡಿದ್ದ ಭಾರತ, ಫೈನಲ್ ರೇಸ್‌ನಿಂದಲೂ ಸಹ ಹೊರಬಿದ್ದಿತ್ತು.
ವಾಸಿಂ ಜಾಫರ್ ಆಯ್ಕೆಯ ಪ್ಲೇಯಿಂಗ್ ಇಲೆವೆನ್
ಶುಭ್ಮನ್ ಗಿಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜೂ ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ದೀಪಕ್ ಹೂಡ, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಲ್, ಅರ್ಶದೀಪ್ ಸಿಂಗ್.