IND v SL Series – ODI : ಕ್ರಿಕೆಟ್ ನಲ್ಲಿ ಭಾರೀ ಅಂತರದ ಗೆಲುವು ಸಾಧಿಸಿ ದಾಖಲೆ ಬರೆದ ಟೀಮ್ ಇಂಡಿಯಾ
ಪ್ರವಾಸಿ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 317 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ, ಆ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದ ದಾಖಲೆ ಬರೆದಿದೆ.
ತಿರುವನಂತಪುರಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 380 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಭಾರತದ ಪರ ವಿರಾಟ್ ಕೊಹ್ಲಿ(166*) ಹಾಗೂ ಶುಭ್ಮನ್ ಗಿಲ್(116) ಭರ್ಜರಿ ಶತಕ ಸಿಡಿಸಿದರೆ. ಮೊಹಮ್ಮದ್ ಸಿರಾಜ್(4/32) ಆಕ್ರಮಣಕಾರಿ ಬೌಲಿಂಗ್‌ನಿಂದ ತಂಡಕ್ಕೆ ಗೆಲುವು ತಂದುಕೊಟ್ಟರು. ಶ್ರೀಲಂಕಾ ತಂಡವನ್ನು 73 ರನ್‌ಗಳಿಗೆ ಕಟ್ಟಿಹಾಕಿ 317 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿತು.
ಈ ಗೆಲುವಿನೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿದ ದಾಖಲೆ ಬರೆದ ಭಾರತ, ಈ ಮೂಲಕ ನ್ಯೂಜಿ಼ಲೆಂಡ್ ಹೆಸರಿನಲ್ಲಿದ್ದ ದಾಖಲೆಯನ್ನ ಬ್ರೇಕ್ ಮಾಡಿತು. ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿ಼ಲೆಂಡ್ 2008ರಲ್ಲಿ ಐರ್ಲೆಂಡ್ ವಿರುದ್ಧ 290 ರನ್‌ಗಳ ಅಂತರದ ಗೆಲುವು ಸಾಧಿಸಿದ್ದು, ಈವರೆಗಿನ ದಾಖಲೆಯಾಗಿತ್ತು.
ಅಲ್ಲದೇ 2015ರಲ್ಲಿ ಆಸ್ಟ್ರೇಲಿಯಾ 275 ರನ್‌ಗಳ ಅಂತರದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು, ಏಕದಿನ ಕ್ರಿಕೆಟ್‌ನ 2ನೇ ದೊಡ್ಡ ಅಂತರದ ಗೆಲುವಾಗಿತ್ತು.
ಲಂಕಾ ತಂಡವನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕಿ 317 ರನ್‌ಗಳ ಭಾರೀ ಅಂತರದ ಗೆಲುವು ಸಾಧಿಸಿದ ಭಾರತ 3-0 ಅಂತರದಲ್ಲಿ ಏಕದಿನ ಸರಣಿ ತನ್ನದಾಗಿಸಿಕೊಂಡಿತು.
IND v SL Series – ODI : india new record by winning with highest runs distance