IND VS AUS 2nd ODI : ಏಕದಿನ ಇತಿಹಾಸದಲ್ಲೇ ಹೀನಾಯ ಸೋಲು ಕಂಡ ಭಾರತ – ಆಸೀಸ್ ಗೆ 10 ವಿಕೆಟ್ ಗಳ ಜಯ….
ಏಕದಿನ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು ಇಂದು ಭಾರತದ್ದಾಗಿದೆ. ಭಾರತ ಆಸ್ಟ್ರೇಲಿಯಾ ನಡುವೆ ನಡೆದ ಎರಡನೇ ಏಕದಿನ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಗಳಿಸಿದೆ. 234 ಎಸೆತಗಳು ಭಾಕಿ ಇರುವಾಗಲೇ ತಡ ಗೆಲುವಿನ ದಡ ಮುಟ್ಟುವ ಮೂಲಕ ದಾಖಲೆ ಬರೆದಿದೆ.
ಏಕದಿನ ಇತಿಹಾಸದಲ್ಲೇ ಭಾರತಕ್ಕ ಇದು ಅತಿದೊಡ್ಡ ಸೋಲಾಗಿದೆ. ಹಿಂದಿನ ಸಾರಿ 212 ಎಸೆತಗಳು ಇರುವಾಗಲೇ ಭಾರತ ಸೋಲನ್ನಪ್ಪಿತ್ತು. 2019 ರಲ್ಲಿ ಹ್ಯಾಮಿಲ್ಟನ್ನಲ್ಲಿ ನ್ಯೂಜಿಲೆಂಡ್ ತಂಡ 10 ವಿಕೆಟ್ ಗಳಿಂದ ಸೋಲಿಸಿತ್ತು.
ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಮೊದಲ ಬ್ಯಾಟಿಂಗ್ ಇಳಿದ ಭಾರತ 26 ಓವರ್ಗಳಲ್ಲಿ 117 ರನ್ ಗಳಿಗೆ ಸರ್ವಪತನ ಕಂಡಿತು. ಸಾಧಾರಣ ಮೊತ್ತ ಬೆನ್ನತ್ತಿದ ಆಸೀಸ್ ಪಡೆ 118 ರನ್ಗಳ ಗುರಿಯನ್ನು 11 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಸಾಧಿಸಲಾಯಿತು.
ಆಸೀಸ್ ತಂಡದ ವೇಗದ ಬೌಲರ್ ಗಳು ಮತ್ತು ಓಪನರ್ ಬ್ಯಾಟರ್ ಗಳು ಎಂದಿಗೂ ಮರೆಯಲಾಗದ ಸೋಲಿನ ಕಥೆ ಬರೆದಿದ್ದಾರೆ. ಆರಂಭಿಕರಾದ ಟ್ರಾವಿಸ್ ಹೆಡ್ (ಔಟಾಗದೆ 51) ಮತ್ತು ಮಿಚೆಲ್ ಮಾರ್ಷ್ (ಅಜೇಯ 66) 66 ಎಸೆತಗಳಲ್ಲಿ ಅಜೇಯ 121 ರನ್ ಜೊತೆಯಾಟ ಆಡಿ ತಂಡವನ್ನ ಸುಲಭವಾಗಿ ಗೆಲ್ಲಿಸಿದ್ದಾರೆ. ಇದಕ್ಕೂ ಮೊದಲು ಮಿಚೆಲ್ ಸ್ಟಾರ್ಕ್ 5 ವಿಕೆಟ್ ಶಾನ್ ಅಬಾಟ್ 3 ಮತ್ತು ನಾಥನ್ ಎಲ್ಲಿಸ್ ಎರಡು ವಿಕೆಟ್ ಪಡೆದು ಬ್ಯಾಟಿಂಗ್ ಬೆನ್ನೆಲುವು ಮುರಿದು ಹಾಕಿದರು.
ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿ ರೋಚಕ ತಿರುವು ಕಂಡಿದೆ. ಇದೀಗ ಎರಡೂ ತಂಡಗಳು 1-1 ರಿಂದ ಸಮಬಲ ಸಾಧಿಸಿವೆ. ಮೂರನೇ ಮತ್ತು ನಿರ್ಣಾಯಕ ಪಂದ್ಯ ಮಾರ್ಚ್ 22 ರಂದು ಚೆನ್ನೈನಲ್ಲಿ ನಡೆಯಲಿದೆ.
IND VS AUS 2nd ODI: India, who suffered a crushing defeat in the history of ODIs, won by 10 wickets for Aussies…