IND vs AUS : ಸರಣಿ ನಿರ್ಣಾಯಕ ಪಂದ್ಯದಲ್ಲಿ 270 ರನ್ ಟಾರ್ಗೆಟ್ ನೀಡಿದ ಆಸೀಸ್….
ಭಾರತ ಆಸ್ಟ್ರೇಲಿಯಾ ಏಕದಿನ ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯಲ್ಲಿ ಆಸ್ಟ್ರೇಲಿಯಾ 270 ರನ್ ಗಳ ಟಾರ್ಗೆಟ್ ನೀಡಿದೆ. ಇದಕ್ಕೆ ಉತ್ತರವಾಗಿ ಭಾರತ ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದೆ. ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಕ್ರೀಸ್ ನಲ್ಲಿದ್ದಾರೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕಾಂಗರೂ ತಂಡ 49 ಓವರ್ ಗಳಲ್ಲಿ 269 ರನ್ ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ 47 ರನ್ ಗಳಿಸಿದರೆ, ಅಲೆಕ್ಸ್ ಕ್ಯಾರಿ 38 ರನ್ ಗಳಿಸಿದರು. ಮಾರ್ನಸ್ ಲಬುಶೆನ್ 28, ಮಾರ್ಕಸ್ ಸ್ಟೊಯಿನಿಸ್ 25, ಟ್ರಾವಿಸ್ ಹೆಡ್ 33 ಮತ್ತು ಡೇವಿಡ್ ವಾರ್ನರ್ 23 ರನ್ ಕೊಡುಗೆ ನೀಡಿದರು.
ಭಾರತದ ಪರ ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ತಲಾ ಮೂರು ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.
ಹೆಡ್-ಮಾರ್ಷ್ ಉತ್ತಮ ಆರಂಭ
ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಜೋಡಿ ಆಸ್ಟ್ರೇಲಿಯಾ ಪರ ಉತ್ತಮ ಆರಂಭ ನೀಡಿದರು. ಇವರಿಬ್ಬರ ನಡುವೆ 65 ಎಸೆತಗಳಲ್ಲಿ 68 ರನ್ಗಳ ಆರಂಭಿಕ ಜೊತೆಯಾಟ ದಕ್ಕಿತ್ತು. 33 ರನ್ ಗಳಿಸಿದ್ದಾಗ ಹೆಡ್ ಪಾಂಡ್ಯ ಗೆ ವಿಕೆಟ್ ಒಪ್ಪಿಸುವ ಮೂಲಕ ವಿಕಟ್ ಗಳ ಪತನ ಶುರುವಾಯಿತು.
IND vs AUS: Aussies set a target of 270 runs in the series decider….