IND vs AUS BGT Series : ಪ್ರಮುಖ ಟೆಸ್ಟ್ ದಾಖಲೆ ಮೇಲೆ ರವಿಚಂದ್ರನ್ ಅಶ್ವಿನ್ ಕಣ್ಣು
ಟೀಂ ಇಂಡಿಯಾದ ಸ್ಪಿನ್ ಬೌಲಿಂಗ್ ಅಸ್ತ್ರವಾಗಿರುವ ರವಿಚಂದ್ರನ್ ಅಶ್ವಿನ್ ಪ್ರಮುಖ ಟೆಸ್ಟ್ ದಾಖಲೆಯ ಅಂಚಿನಲ್ಲಿದ್ದು, ಆಸ್ಟ್ರೇಲಿಯಾ ವಿರುದ್ಧ ನಡೆಯುವ ಟೆಸ್ಟ್ ಸರಣಿಯಲ್ಲಿ ಈ ದಾಖಲೆ ಬರೆಯಲು “ಕೇರಂ ಸ್ಪೆಷಲಿಸ್ಟ್” ಸಜ್ಜಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಚಾಣಾಕ್ಷ ಸ್ಪಿನ್ ಬೌಲಿಂಗ್ನಿಂದಲೇ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳ ನಿದ್ದೆಗೆಡಿಸಿರುವ ಆರ್. ಅಶ್ವಿನ್, ಟೆಸ್ಟ್ ಕ್ರಿಕೆಟ್ನಲ್ಲಿ 450 ವಿಕೆಟ್ಗಳ ಸಾಧನೆ ಮಾಡಲು ಕೇವಲ 1 ವಿಕೆಟ್ ಅಗತ್ಯವಿದೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈ ಸಾಧನೆ ಮಾಡುವ ಮೂಲಕ ಭಾರತದ ಪರ ವೇಗವಾಗಿ 450 ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸುವ ಅವಕಾಶ ಹೊಂದಿದ್ದಾರೆ.
ಸದ್ಯ ಈ ದಾಖಲೆ ಭಾರತ ಕ್ರಿಕೆಟ್ ತಂಡದ ಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದು, ಕನ್ನಡಿಗ ಕುಂಬ್ಳೆ 93 ಟೆಸ್ಟ್ ಪಂದ್ಯಗಳಲ್ಲಿ ಈ ದಾಖಲೆ ಬರೆದಿದ್ದರು. ಇನ್ನೂ ವಿಶ್ವ ಕ್ರಿಕೆಟ್ನಲ್ಲಿ ಶ್ರೀಲಂಕಾ ತಂಡದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ 80 ಪಂದ್ಯಗಳಲ್ಲಿ 450 ವಿಕೆಟ್ ಪಡೆದ ಹೆಗ್ಗಳಿಕೆ ಹೊಂದಿದ್ದಾರೆ.
ಸದ್ಯ 88 ಟೆಸ್ಟ್ಗಳಲ್ಲಿ 449 ವಿಕೆಟ್ ಪಡೆದಿರುವ ಆರ್. ಅಶ್ವಿನ್, 30 ಬಾರಿ ಐದು ವಿಕೆಟ್ಗಳನ್ನ ಪಡೆದಿದ್ದಾರೆ. ಅಲ್ಲದೇ ಈವರೆಗೂ 7 ಬಾರಿ 10 ವಿಕೆಟ್ ಪಡೆದ ಸಾಧನೆ ಕೂಡ ಅಶ್ವಿನ್ ಹೆಸರಿನಲ್ಲಿದೆ.
IND vs AUS BGT Series , Ravichandran Ashwin