IND vs AUS : ಭಾರತ ಸ್ಟ್ರಾಂಗ್ ಕಮ್‌ಬ್ಯಾಕ್: ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ 197ಕ್ಕೆ ಆಲೌಟ್
ಉಮೇಶ್ ಯಾದವ್(3/12) ಹಾಗೂ ರವಿಚಂದ್ರನ್ ಅಶ್ವಿನ್(3/44) ಅವರ ಆಕ್ರಮಣಕಾರಿ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲೌಟ್ ಆಗಿದೆ.
ಇಂಧೋರ್ ನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನದಾಟದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಆಕ್ರಮಣಕಾರಿ ದಾಳಿ ನಡೆಸಿದರು.
ಮೊದಲ ದಿನದ ಮೊತ್ತ 156/4 ರನ್‌ಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದಲ್ಲಿತ್ತು. ಆದರೆ ಈ ಎಲ್ಲಾ ಲೆಕ್ಕಾಚಾರವನ್ನ ತಲೆಕೆಳಗಾಗಿಸಿದ ಭಾರತದ ಬೌಲರ್‌ಗಳು ಆಸ್ಟ್ರೇಲಿಯಾ ತಂಡವನ್ನ 197 ರನ್‌ಗಳಿಗೆ ಕಟ್ಟಿಹಾಕಿದರು. ಇದರೊಂದಿಗೆ ಆಸೀಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 88 ರನ್‌ಗಳ ಮುನ್ನಡೆ ಸಾಧಿಸಿತು.
2ನೇ ದಿನದಾಟ ಆರಂಭಿಸಿದ ಪೀಟರ್ ಹ್ಯಾಂಡ್ಸ್ಕೋಬ್(19) ಹಾಗೂ ಕೆಮರೂನ್ ಗ್ರೀನ್(21) ಉತ್ತಮ ಆರಂಭ ಪಡೆದರು. ಆದರೆ ಉತ್ತಮ ಲಯದಲ್ಲಿ ಆಡುತ್ತಿದ್ದ ಈ ಜೋಡಿಯನ್ನ ಅಶ್ವಿನ್ ಬೇರ್ಪಡಿಸಿದರು.
ತಂಡದ ಮೊತ್ತ 186 ರನ್‌ಗಳಿದ್ದ ವೇಳೆ ಹ್ಯಾಂಡ್ಕೋಬ್ ತಮ್ಮ ವಿಕೆಟ್ ಒಪ್ಪಿಸಿ ಹೊರ ನಡೆದರೆ, ಇವರ ಬೆನ್ನಲ್ಲೇ ಕೆಮರೂನ್ ಗ್ರೀನ್ ಕೂಡ ಔಟಾದರು.
ಇವರಿಬ್ಬರ ಬಳಿಕ ಬಂದ ಯಾವುದೇ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 197ಕ್ಕೆ ಆಲೌಟ್ ಆಯಿತು.
ಭಾರತದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಜಡೇಜಾ(4/78) ಮೊದಲ ದಿನದಂದು ಆಸೀಸ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರೆ. 2ನೇ ದಿನದಾಟದಲ್ಲಿ ಉಮೇಶ್ ಯಾದವ್(3/12) ಹಾಗೂ ಆರ್. ಅಶ್ವಿನ್(3/44) ಆಸೀಸ್ ಆಟಗಾರರಿಗೆ ಮಾರಕವಾದರು.
IND vs AUS , India’s Strong Comeback