IND vs AUs ಟೆಸ್ಟ್ ಗೆ ಸೂರ್ಯ ಕುಮಾರ್ ಪದಾರ್ಪಣೆ
ಟೀಮ್ ಇಂಡಿಯಾದ ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ನಾಗ್ಪುರ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದಾರೆ.
ಸೂರ್ಯ ಕುಮಾರ್ ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಸ್ಟ್ ಪಂದ್ಯಕ್ಕೆ ಆಯ್ಕೆಯಾಗುವ ಮೂಲಕ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಗೆ ಪದಾರ್ಪಣೆ ಮಾಡಿದರು.
ಟಿ20 ಕ್ರಿಕೆಟ್ ನಲ್ಲಿ ಸೂರ್ಯ ಕುಮಾರ್ ವಿಶ್ವದ ನಂ.1 ಬ್ಯಾಟರ್ ಆಗಿ ಹೊರ ಹೊಮ್ಮಿದ್ದಾರೆ. ಇದೀಗ ಟೆಸ್ಟ್ ಗೂ ಪದಾರ್ಪಣೆ ಮಾಡಿದ್ದಾರೆ.
ಈ ಮೂಲಕ ಟೆಸ್ಟ್ ಗೆ ಪಾದರ್ಪಣೆ ಮಾಡಿದ 304ನೇ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಬಳಲಿದ್ದರಿಂದ 32 ವರ್ಷದ ಸೂರ್ಯ ಕುಮಾರ್ಗೆ ಮಣೆ ಹಾಕಬೇಕಾಯಿತು.
ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಲು ಶುಭ್ಮನ್ ಗಿಲ್ ಜೊತೆ ಸೂರ್ಯ ಕುಮಾರ್ ಸ್ಪರ್ಧೆ ಇಳಿಯಬೇಕಾಯಿತು. ಅಂತಿಮವಾಗಿ ನಾಯಕ ರೋಹಿತ್ ಶುಭ್ ಮನ್ ಗಿಲ್ ಬದಲು ಸೂರ್ಯ ಕುಮಾರ್ಗೆ ಅವಕಾಶ ನೀಡಿದ್ದಾರೆ.