IND vs AUS : ಆಸೀಸ್ ತಂಡದ 13 ವರ್ಷಗಳ ಶತಕದ ಬರ ನೀಗಿಸಿದ ಉಸ್ಮಾನ್ ಖವಾಜ
ಭಾರತದ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸಿದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ, ಆ ಮೂಲಕ ಆಸ್ಟ್ರೇಲಿಯಾ ತಂಡದ 13 ವರ್ಷಗಳ ಶತಕದ ಬರ ನೀಗಿಸಿದ್ದಾರೆ.
ಅಹ್ಮದಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಂದು ಜವಾಬ್ದಾರಿಯ ಆಟವಾಡಿದ ಖವಾಜ(104*) ರನ್‌ಗಳಿಸುವ ಮೂಲಕ ಆಸೀಸ್ ತಂಡಕ್ಕೆ ಆಸರೆಯಾದರು.
ಖವಾಜ ಅವರ ಅದ್ಭುತ ಇನ್ನಿಂಗ್ಸ್ ನೆರವಿನಿಂದ ಆಸ್ಟ್ರೇಲಿಯಾ ಮೊದಲ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 255 ರನ್‌ಗಳಿಸುವ ಮೂಲಕ ಬೃಹತ್ ಮೊತ್ತದತ್ತ ಮುಖ ಮಾಡಿದೆ.
ಈ ಶತಕದೊಂದಿಗೆ ಭಾರತ ನೆಲದಲ್ಲಿ ಶತಕ ದಾಖಲಿಸಿದ ಆಸ್ಟ್ರೇಲಿಯಾ ತಂಡದ 11ನೇ ಆರಂಭಿಕ ಬ್ಯಾಟರ್ ಎನಿಸಿದರು.
ಅಲ್ಲದೇ 2010ರ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಓಪನಿಂಗ್ ಬ್ಯಾಟರ್ ಎಂಬ ಹಿರಿಮೆಗೂ ಉಸ್ಮಾನ್ ಖವಾಜ ಪಾತ್ರರಾಗಿದ್ದಾರೆ.
ಆಸೀಸ್ ತಂಡದ ಆರಂಭಿಕ ಬ್ಯಾಟರ್ ಶೇನ್ ವಾಟ್ಸನ್, ಭಾರತದಲ್ಲಿ ಟೆಸ್ಟ್ ಶತಕ ಸಿಡಿಸಿದ ಕೊನೆಯ ಬ್ಯಾಟ್ಸ್‌ಮನ್ ಆಗಿದ್ದರು.
ಮೊದಲ ದಿನದಂದು ತಾಳ್ಮೆಯ ಆಟವಾಡಿದ ಖವಾಜ, 251 ಬಾಲ್‌ಗಳಲ್ಲಿ 15 ಬೌಂಡರಿ ನೆರವಿನಿಂದ 104* ರನ್‌ಗಳಿಸಿದ್ದು, 2ನೇ ದಿನದಾಟದಲ್ಲಿ ಮತ್ತಷ್ಟು ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸುವ ತವಕದಲ್ಲಿದ್ದಾರೆ.
IND vs AUS : Usman Khawaja broke the 13-year century drought of the Aussie team