IND VS AUS : ಶತಕದ ಸನಿಹದಲ್ಲಿ ವಿರಾಟ್ ಕೊಹ್ಲಿ – ಟೀಂ ಇಂಡಿಯಾ 362/4
ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್‌ನ ನಾಲ್ಕನೇ ದಿನದ ಊಟದ ವೇಳೆಗೆ ಟಿಮ್ ಇಂಡಿಯಾ 4 ವಿಕೆಟ್ ನಷ್ಟಕ್ಕೆ ಭಾರತ 362 ರನ್ ಗಳಿಸಿದೆ. ವಿರಾಟ್ ಕೊಹ್ಲಿ (88) ರನ್ ಗಳಿಸಿ ಶತಕದ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ಶ್ರೀಕರ್ ಭರತ್ (25) ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಬ್ಬರ ನಡುವೆ ಅರ್ಧಶತಕದ ಜೊತೆಯಾಟ ಸಾಗಿ ಬಂದಿದ್ದು, ಕೊಹ್ಲಿ ತಮ್ಮ 28ನೇ ಟೆಸ್ಟ್ ಶತಕಕ್ಕೆ 12 ರನ್‌ಗಳ ಅಂತರದಲ್ಲಿದ್ದಾರೆ.
ರವೀಂದ್ರ ಜಡೇಜಾ 23 ರನ್ ಗಳಿಸಿ ಔಟಾಗಿದ್ದಾರೆ. ಉಸ್ಮಾನ್ ಖವಾಜಾ ಅವರ ಬೌಲಿಂಗ್ ಅಲ್ಲಿ ಟಾಡ್ ಮರ್ಫಿ ಕ್ಯಾಚ್ ಪಡೆದಿದ್ದಾರೆ. ಜಡೇಜಾ 170 ಎಸೆತಗಳಲ್ಲಿ ಕೊಹ್ಲಿ ಜೊತೆ 64 ರನ್ ಜೊತೆಯಾಟ ನಡೆಸಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 289/3ಕ್ಕೆ ಇನಿಂಗ್ಸ್ ಮುಗಿಸಿತು. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 480 ರನ್ ಗಳಿಸಿತ್ತು.
39 ತಿಂಗಳ ನಂತರ ಶತಕ ಗಳಿಸುವ ಸಾಧ್ಯತೆ…
8 ಪಂದ್ಯಗಳು, 15 ಇನ್ನಿಂಗ್ಸ್ ಮತ್ತು 14 ತಿಂಗಳ ನಂತರ ಕೊಹ್ಲಿ ಬ್ಯಾಟ್‌ನಿಂದ ಟೆಸ್ಟ್‌ನಲ್ಲಿ ಅರ್ಧಶತಕ ಬಂದಿದೆ. ಇದಕ್ಕೂ ಮೊದಲು, 11 ಜನವರಿ 2022 ರಂದು, ಅವರು ದಕ್ಷಿಣ ಆಫ್ರಿಕಾದಲ್ಲಿ ಫಿಫ್ಟಿ ಕಲೆಹಾಕಿದ್ದರು. ಕೊಹ್ಲಿ ಈಗ ಅಜೇಯರಾಗಿ ಆಡುತ್ತಿದ್ದಾರೆ. ಶತಕ ಬಾರಿಸಿದರೆ, ಟೆಸ್ಟ್ ನಲ್ಲಿ 1205 ದಿನಗಳು ಮತ್ತು 39 ತಿಂಗಳ ನಂತರ ಟೆಸ್ಟ್ ಶತಕವನ್ನ ದಾಖಲಿಸಿದ ಸಾಧನೆ ಮಾಡಲಿದ್ದಾರೆ. ಅವರು ಕೊನೆಯ ಬಾರಿಗೆ 23 ನವೆಂಬರ್ 2019 ರಂದು ಬಾಂಗ್ಲಾದೇಶ ವಿರುದ್ಧ ತಮ್ಮ 27 ನೇ ಟೆಸ್ಟ್ ಶತಕವನ್ನು ದಾಖಲಿಸಿದ್ದರು.
IND VS AUS: Virat Kohli nears century – Team India 362/4