IND vs Aus ದೆಹಲಿಯಲ್ಲಿ ವಿರಾಟ್ ಕೊಹ್ಲಿ ಸಾಧನೆ ಏನು…?
ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಸದ್ಯ ಕಳಪೆ ಫಾರ್ಮನಲ್ಲಿದ್ದಾರೆ.
ಮೊನ್ನೆ ನಾಗ್ಪುರ ಟೆಸ್ಟ್ ಪಂದ್ಯದಲ್ಲಿ ಆಡಿದ ಎರಡೂ ಇನ್ನಿಂಗ್ಸ್ ಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ.
2019ರಲ್ಲಿ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ಶತಕ ಸಿಡಿಸಿದ್ದರು. ನಂತರ ತವರಿನಲ್ಲಿಯೂ ಶತಕ ಸಿಡಿಸಲು ಆಗದೇ ಕಳಪೆ ಫಾರ್ಮ್ ಅನುಭವಿಸುತ್ತಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನ ವಿರಾಟ್ ಕೊಹ್ಲಿ ಅವರ ತವರಿನ ಅಂಗಳವಾಗಿದೆ. ತವರು ಅಂಗಳದಲ್ಲಾದರೂ ಫಾರ್ಮಗೆ ಮರಳುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.
2013ರಿಂದ ತಮ್ಮ ತವರು ಅಂಗಳದಲ್ಲಿ ಆಡಿದ ವಿವರ ಇಲ್ಲಿದೆ.
2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ 1 ರನ್ ಗಳಿಸಿದ್ದರು. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧದ 60 ಎಸೆತದಲ್ಲಿ 41 ರನ್ ಗಳಿಸಿದರು. 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 62 ಎಸೆತದಲ್ಲಿ 44 ರನ್ ಗಳಿಸಿದರು.
2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 165 ಎಸೆತದಲ್ಲಿ 88 ರನ್ ಹೊಡೆದಿದ್ದರು.
2017ರಲ್ಲಿ ಶ್ರೀಲಂಕಾ ವಿರುದ್ಧ 287 ಎಸೆತ ಎದುರಿಸಿ 243 ರನ್ ಹೊಡೆದಿದ್ದರು.2017ರಲ್ಲಿ ಶ್ರೀಲಂಕಾ ವಿರುದ್ಧ ಅರ್ಧ ಶತಕ ಸಿಡಿಸಿದ್ದರು.
IND vs Aus , virat kohli , saakshatv








