Ind vs Ban 2nd Test : ಸಿಕ್ಸರ್ ಬಾರಿಸಿ ಅರ್ಧಶತಕ ಗಳಿಸಿದ ಪಂತ್ – ಇಂಡಿಯಾ 170/4
ಮಿರ್‌ಪುರದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ 2 ನೇ ಟೆಸ್ಟ್‌ನ 2 ನೇ ದಿನದ ಆಟ ಮುಂದುವರೆಯುತ್ತಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 170 ರನ್ ಗಳಿಸಿದೆ.
ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇವರಿಬ್ಬರ ನಡುವೆ 5ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆದಿದೆ. ಪಂತ್ 11ನೇ ಅರ್ಧಶತಕ ಪೂರೈಸಿದ್ದಾರೆ.
ವಿರಾಟ್ ಕೊಹ್ಲಿ 24 ರನ್ ಗಳಿಸಿದ್ದಾಗ ತಸ್ಕಿನ್ ಅಹ್ಮದ್ ಬೌಲಿಂಗ್ ನಲ್ಲಿ ಕೀಪರ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ತೈಜುಲ್ ಇಸ್ಲಾಂ ಬಾಂಗ್ಲಾದೇಶದ ಪರ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.
ಬಾಂಗ್ಲಾದೇಶ ತಂಡದ ಮೊದಲ ಇನಿಂಗ್ಸ್ ಮೊದಲ ದಿನ 227 ರನ್‌ಗಳಿಗೆ ಅಲೌಟ್ ಆಗಿತ್ತು. ಇನ್ನೂ ರಿಷಬ್ ಪಂತ್ 49 ಬಾಲ್ ಗಳಲ್ಲಿ 11ನೇ ಟೆಸ್ಟ್ ಅರ್ಧಶತಕ ದಾಖಲಿಸಿದ್ದಾರೆ. ಇದಕ್ಕೂ ಮೊದಲು ಅನುಭವಿ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಟೆಸ್ಟ್ ನಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ. ಪೂಜಾರ 167 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
Ind vs Ban 2nd Test: Pant scored a half century by hitting a six – India 170/4