IND vs BNG : ಜಡೇಜಾ ಬದಲು ಶಹಬಾಜ್ ಗೆ ಅವಕಾಶ, ದಯಾಳ್ ಬದಲು ಕುಲದೀಪ್ ಗೆ ಸ್ಥಾನ
ಮುಂಬರುವ ಬಾಂಗ್ಲಾ ವಿರುದ್ಧದ ಏಕದಿನ ಸರಣಿಗೆ ಆಲ್ರೌಂಡರ್ ರವೀಂದ್ರ ಜಡೇಜಾ ಬದಲು ಶಹಬಾಜ್ ಅಹಮದ್ಗೆ ಅವಕಾಶ ನೀಡಲಾಗಿದೆ.
ಗಾಯಗೊಂಡಿರುವ ಮತ್ತೋರ್ವ ವೇಗಿ ಯಶ್ ದಯಾಳ್ ಬದಲು ವೇಗಿ ಕುಲದೀಪ್ ಸೇನ್ಗೆ ಆಯ್ಕೆ ಸಮಿತಿ ಮಣೆ ಹಾಕಿದೆ.
ಶಸಚಿಕಿತ್ಸೆಗೆ ಒಳಪಟ್ಟಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಇನ್ನು ಫಿಟ್ ಆಗಿಲ್ಲ. ತಂಡಕ್ಕೆ ಆಯ್ಕೆಯಾಗಿದ್ದ ಯುವ ವೇಗಿ ಯಶ್ ದಯಾಳ್ ಬೆನ್ನು ನೋವಿಗೆ ಗುರಿಯಾಗಿದ್ದಾರೆ.
ಆಲ್ರೌಂಡರ್ ಶಹಬಾಜ್ ಅಹಮದ್ ಮತ್ತು ಕುಲದೀಪ್ ಸೇನ್ ಈ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿತ್ತು.
ಆದರೆ ಈಗ ಆಯ್ಕೆ ಮಾಡಿರುವ ತಂಡದಲ್ಲಿ ಬದಲಾವಣೆ ಇಲ್ಲದ ಕಾರಣ ಈ ಇಬ್ಬರು ಆಟಗಾರು ಕಿವೀಸ್ ನಾಡಿಗೆ ಪ್ರವಾಸ ಮಾಡಿಲ್ಲ.
ಇದೀಗ ಬಾಂಗ್ಲಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ಏಕದಿನ ವಿಶ್ವಕಪ್ಗೆ 11 ತಿಂಗಳು ಬಾಕಿ ಇರುವುದರಿಂದ ಟೀಮ್ ಇಂಡಿಯಾ ಬಲಿಷ್ಠ ತಂಡ ಕಟ್ಟಲು ಪ್ರಯೋಗ ಮಾಡಿ ಸಜ್ಜಾಗುತ್ತಿದೆ.