IND vs BNG Test : ಇಂದಿನಿಂದ ಭಾರತ, ಬಾಂಗ್ಲಾ 2ನೇ ಟೆಸ್ಟ್ ಮ್ಯಾಚ್..!!
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳಲು ಪಣತೊಟ್ಟಿರುವ ಟೀಮ್ ಇಂಡಿಯಾ ಇಂದಿನಿಂದ ಆತಿಥೇಯ ಬಾಂಗ್ಲಾದೇಶ ವಿರುದ್ಧ ಎರಡನೆ ಟೆಸ್ಟ್ ಆಡಲಿದೆ.
ಇಲ್ಲಿನ ಶೇರೆ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ದೃಷ್ಟಿಯಿಂದ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಮೊದಲ ಎರಡು ಸ್ಥಾನಕ್ಕೆ ಪೈಪೋಟಿ ಇದ್ದು ಭಾರತ (55.77 ಶೇ) ದ.ಆಫ್ರಿಕಾ (54.55 ಶೇ.) ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗಬ್ಬಾ ಟೆಸ್ಟ್ನಲ್ಲಿ ಸೋಲು ಕಂಡಿದ್ದು ದೊಡ್ಡ ಹೊಡೆತ ನೀಡಿದೆ.
ಮುಂಬರುವ ತವರಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ವಿಶ್ವ ಟೆಸ್ಟ್ ಫೈನಲ್ ಚಾಂಪಿಯನ್ಶಿಪ್ಗೆ ಸತತ ಎರಡನೆ ಬಾರಿಗೆ ಫೈನಲ್ಗೆ ಹೋಗಲು ಟೀಮ್ ಇಂಡಿಯಾ ಹೋಡಾಲಿದೆ.
ನಾಯಕ ರೋಹಿತ್ ಶರ್ಮಾ ಎರಡನೆ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ಎರಡನೆ ಟೆಸ್ಟ್ ನಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.ಮೊದಲ ಟೆಸ್ಟ್ನಲ್ಲಿ ಶೂಭಮನ್ ಗಿಲ್ ಮತ್ತು ಕುಲ್ದೀಪ್ ಯಾದವ್ ಸಿಕ್ಕ ಅವಕಾಶದಲ್ಲಿ ಮಿಂಚಿದರು.
ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಮೀರ್ಪುರ ಪಿಚ್ ನಿಧಾನಗತಿಯಿಂದ ಕೂಡಿದೆ.
ಟೆಸ್ಟ್ ಸ್ಪೆಶಲಿಸ್ಟ್ ಚೇತೇಶದ್ವರ ಪೂಜಾರ ಒಳ್ಳೆಯ ಲಯದಲ್ಲಿದ್ದಾರೆ. ವಿರಾಟ್ ಕೊಹ್ಲಿಗೆ ಶತಕ ಸಿಡಿಸಲು ಇದು ಅವಕಾಶವಾಗಿದೆ. 2019ರಿಂದ ಟೆಸ್ಟ್ನಲ್ಲಿ ವಿರಾಟ್ ಶತಕ ಸಿಡಿಸಿಲ್ಲ.
ಈ ಪಿಚ್ನಲ್ಲಿ ಬೌಲರ್ಗಳು ಮತ್ತೆ ಮಿಂಚಲಿದ್ದಾರೆ. ಆರ್.ಅಶ್ವಿನ್ ಮತ್ತು ಅಕ್ಸರ್ ಪಟೇಲ್ಗಿಂತ ಕುಲ್ದೀಪ್ ಯಾದವ್ ಒಳ್ಳೆಯ ಬೌಲಿಂಗ್ ಮಾಡಿದ್ದು ಮೊದಲ ಟೆಸ್ಟ್ನಲ್ಲಿ 8 ವಿಕೆಟ್ ಪಡೆದಿದ್ದಾರೆ. ಸ್ಪಿನ್ ಸ್ನೇಹಿ ಪಿಚ್ನಲ್ಲಿ ಶ್ವಿನ್ ಮೊನ್ನೆ ಕೇವಲ 1 ವಿಕೆಟ್ ಪಡೆದಿದ್ದಾರೆ.
ಅಕ್ಸರ್ ಪಟೇಲ್ ಎರಡನೆ ಇನ್ನಿಂಗ್ಸ್ನಲ್ಲಿ ಬ್ಯಾಟರ್ಗಳಿಗೆ ಕಠಿಣ ಸವಾಲು ಎಸೆದು 4 ವಿಕೆಟ್ ಪಡೆದರು.
ಇನ್ನು ಬಾಂಗ್ಲಾದೇಶ ತಂಡ ಮೊನ್ನೆ ನಾಲ್ಕನೆ ದಿನ ಅದ್ಭುತ ಬ್ಯಾಟಿಂಗ್ ಮಾಡಿ ಆತ್ಮವಿಶ್ವಾಸದಲ್ಲಿದೆ.
ಜಾಕೀರ್ ಹಸನ್ ಶತಕ ಸಿಡಿಸಿ ಮಿಂಚಿದ್ದಾರೆ. ಲಿಟನ್ ದಾಸ್ ಮತ್ತು ಮುಷಫೀಕುರ್ ರಹೀಮ್ ತಪ್ಪುಗಳಿಂದ ಪಾಠ ಕಲಿಯಬೇಕಿದೆ.
ಸಂಭವ್ಯ ತಂಡಗಳು
ಭಾರತ : ಕೆ.ಎಲ್.ರಾಹುಲ್ (ನಾಯಕ),ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷ`ಭ ಪಂತ್ (ವಿಕೆಟ್ ಕೀಪರ್), ಕೆ.ಎಸ್.ಭರತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್,ಮೊಹ್ಮದ್ ಸೀರಾಜ್, ಉಮೇಶ್ ಯಾದವ್, ಅಭಿಮನ್ಯು ಈಶ್ವರನ್, ಸೌರಭ ಕುಮಾರ್, ಜಯದೇವ್ ಉನಾದ್ಕತ್.
ಬಾಂಗ್ಲಾದೇಶ : ಮೊಹಮ್ದ್ಹುಲ್ ಹಸನ್ ಜಾಯ್, ನಜ್ಮುಲ್ ಹೊಸೇನ ಶಾಂಟೊ, ಮೊಮಿನುಲ್ ಹಕ್, ಶಕೀಬ್ ಅಲ್ ಹಸನ್ (ನಾಯಕ), ನೂರುಲ್ ಹಸನ್, ಮೆಹದಿ ಹಸನ್ ಮೀರಾಜ್, ತೈಜುಲ್ ಇಸ್ಲಾಮ್, ತಸ್ಕಿನ್ ಅಹ್ಮದ್, ಖಲೀದ್ ಅಹಮದ್, ‘
ಜಾಕೀರ್ ಹಸನ್, ರೆಜಾರ್ ರೆಹಮಾನ್ ರಾಜಾ.
ಪಂದ್ಯ ಆರಂಭ : ಬೆಳ್ಗಗೆ 9 ಗಂಟೆ
ನೇರ ಪ್ರಸಾರ : ಸೋನಿ ಲೈವ್
ದಾಖಲೆ ಬರೆಯಲು ಸಜ್ಜಾದ ಪೂಜಾರ, ಅಶ್ವಿನ್
ಬಾಂಗ್ಲಾ ವಿರುದ್ಧದ ಎರಡನೆ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಮತ್ತು ಆಲ್ರೌಂಡರ್ ಆರ್. ಅಶ್ವಿನ್ ಹೊಸ ಮೈಲುಗಲ್ಲು ಮುಟ್ಟಲಿದ್ದಾರೆ. ಚೇತೇಶ್ವರ ಪೂಜಾರ ಇನ್ನು 16 ರನ್ ಹೊಡೆದರೆ ಟೆಸ್ಟ್ನಲ್ಲಿ 8 ಸಾವಿರ ರನ್ ಪೂರೈಸಲಿದ್ದಾರೆ. ಅಶ್ವಿನ್ 11 ರನ ಹೊಡೆದರೆ 3 ಸಾವಿರ ರನ್ ಪೂರೈಸಲಿದ್ದಾರೆ.