ನಿರ್ಣಾಯಕ ಪಂದ್ಯದಲ್ಲಿ ಆಂಗ್ಲರಿಗೆ 329 ರನ್ ಗುರಿ ನೀಡಿದ ಭಾರತ
ಪುಣೆ : ಸರಣಿ ಕೈ ವಶಪಡಿಸಿಕೊಳ್ಳುವ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 329 ರನ್ ಗಳ ಗುರಿ ನೀಡಿದೆ.
ಪುಣೆ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಧವನ್, ರಿಷಭ್, ಹಾರ್ಧಿಕ್ ಪಾಂಡ್ಯ ಅಬ್ಬರದ ಅರ್ಧಶತಕದ ನೆರವಿನಿಂದ 329 ರನ್ ಗಳನ್ನ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ, ಶಿಖರ್ ಧವನ್ ಶತಕದ ಆರಂಭ ನೀಡಿದರು.
ರೋಹಿತ್ (37) ಮತ್ತು ಶಿಖರ್ ಧವನ್ ಮೊದಲ ವಿಕೆಟ್ ಗೆ 103 ರನ್ ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟರು.
ಆದರೆ 37 ಎಸೆತಗಳಲ್ಲಿ 37 ರನ್ ಗಳಿಸಿದ್ದ ರೋಹಿತ್ ಶರ್ಮಾ, ರಶೀದ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಕೊಹ್ಲಿ ಕೂಡ 7 ರನ್, ಕೆ.ಎಲ್.ರಾಹುಲ್ 7 ರನ್ ಗಳಿಸಿ ಪೆವಲಿಯನ್ ನತ್ತ ಹೆಜ್ಜೆ ಹಾಕಿದ್ರು.
ಈ ಹಂತದಲ್ಲಿ ಭಾರತ ಒತ್ತಡಕ್ಕೆ ಸಿಲುಕಿತ್ತು. ಈ ಸಂಕಷ್ಟದ ಸಂದರ್ಭದಲ್ಲಿ ತಂಡಕ್ಕೆ ನೆರವಾದ ಪಂತ್ ಮತ್ತು ಪಾಂಡ್ಯ ಜೋಡಿ 5ನೇ ವಿಕೆಟ್ ಜೊತೆಯಾಟದಲ್ಲಿ 99 ರನ್‍ಸೂರೆಗೈದರು.
ಶತಕದತ್ತ ಮುನ್ನುಗ್ಗುತ್ತಿದ್ದ ರಿಷಭ್ ಪಂತ್, 62 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 78ರನ್ ಗಳಿಸಿ ಔಟ್ ಆದರು.
ಇದರ ಬೆನ್ನಲ್ಲೆ ಹಾರ್ದಿಕ್ ಪಾಂಡ್ಯ 64 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಶಾರ್ದುಲ್ ಠಾಕೂರ್ 21 ಎಸೆತಗಳಲ್ಲಿ 30 ರನ್ ಗಳಿಸಿದರೆ, ಕೃನಾಲ್ ಪಾಂಡ್ಯ ನಿಧಾನಗತಿಯ 25ರನ್ ಗಳಿಸಿದರು.
ಭುವನೇಶ್ವರ್ 3, ಪ್ರಸಿಧ್ ಕೃಷ್ಣ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಅಂತಿಮ ವಾಗಿ ಟೀಂ ಇಂಡಿಯಾ 48.1 ಓವರ್ ಗಳಿಗೆ ತನ್ನೇಲ್ಲಾ ವಿಕೆಟ್ ಗಳನ್ನ ಕಳೆದುಕೊಂಡು 329 ರನ್ ಗಳಿಸಿತು.
