IND vs ENG – ಇಂಗ್ಲೆಂಡ್ ಗೆಲುವನ್ನ ಹಾಡಿ ಹೊಗಳಿದ ಕ್ರಿಕೆಟ್ ದಿಗ್ಗಜರು…
ಭಾರತ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಐತಿಹಾಸಿಕ ಗೆಲುವು ದಾಖಲಿಸಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಹಿನ್ನಡೆಯ ನಂತರ, ಸರಣಿ ಸೋಲನಿಂದ ಪಾರಾಗಲು ಮಾಡು ಇಲ್ಲವೇ ಮಡಿ ಎನ್ನುವಂತೆ ಇಂಗ್ಲೆಂಡ್ ಕಾದಾಡಬೇಕಿತ್ತು. ಬೆನ್ ಸ್ಟೋಕ್ಸ್ ತಂಡವು ಅದೇ ಮಾದರಿಯಲ್ಲಿ ಆಡಿ ಸರಣಿಯಯನ್ನ ಸಮಬಲಗೊಳಿಸಿಕೊಂಡಿದೆ.
ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಗೆಲ್ಲಲು ಕಠಿಣ 378 ರನ್‌ಗಳನ್ನ ಬೆನ್ನತ್ತಬೇಕಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅಷ್ಟು ಸುಲಭವಾಗಿರಲಿಲ್ಲ. ಇಂಗ್ಲೆಂಡ್ ಹಿಂದೆಂದೂ ಇಂಥಹ ದೊಡ್ಡ ಗುರಿಯನ್ನ ಬೆನ್ನಟ್ಟಿರಲಿಲ್ಲ. ಅದರಲ್ಲೂ ಭಾರತ ತಂಡ ಟೆಸ್ಟ್‌ನಲ್ಲಿ 339 ರನ್‌ಗಳಿಗಿಂತ ಹೆಚ್ಚಿನ ಗುರಿ ನೀಡಿದಾಗ ಯಾವುದೇ ತಂಡ ಬೆನ್ನಟ್ಟಲು ಸಾಧ್ಯವಾಗಿರಲಿಲ್ಲ. ಆದರೆ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಮೊತ್ತವನ್ನ ನೀರು ಕುಡಿದಷ್ಟೇ ಸಲೀಸಾಗಿ ಚೇಸ್ ಮಾಡಿ ಇತಿಹಾಸವನ್ನ ಸೃಷ್ಟಿಸಿದ್ದಾರೆ.
ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯನ್ನು 2-2 ರಿಂದ ಸಮಬಲಗೊಳಿಸಿದೆ. 78 ಓವರ್‌ಗಳಲ್ಲಿ 378 ರನ್ ಗಳನ್ನ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನ ಯಶಸ್ವಿಯಾಗಿ ಚೇಸ್ ಮಾಡಿರು. ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಅಜೇಯ 269 ರನ್ ಜೊತೆಯಾಟ ತಂಡದ ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿತು.ಐತಿಹಾಸಿಕ ಗೆಲುವಿನ ಬಳಿಕ ಕ್ರಿಕೆಟ್ ಲೋಕದ ದಿಗ್ಗಜರು ಇಂಗ್ಲೆಂಡ್ ತಂಡವನ್ನ ಮನಮೆಚ್ಚಿ ಹೊಗಳಿದ್ದಾರೆ.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿ ” ಸರಣಿಯನ್ನ ಸಮಬಲಗೊಳಿಸಲು ಇಂಗ್ಲೆಂಡ್‌ಗಿದು ವಿಶೇಷ ಗೆಲುವು. ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಉತ್ತಮ ಫಾರ್ಮ್‌ನಲ್ಲಿದ್ದು, ಅವರ ಆಟ ನೋಡಿದಾಗ ಬ್ಯಾಟಿಂಗ್ ತುಂಬಾ ಸುಲಭ ಎನಿಸುವಂತೆ ಆಡಿದರು. ಉತ್ತಮ ಗೆಲುವಿಗಾಗಿ ಇಂಗ್ಲೆಂಡ್ ತಂಡಕ್ಕೆ ಅಭಿನಂದನೆಗಳು.” ಎಂದು ಬರೆದುಕೊಂಡಿದ್ದಾರೆ.
ಮಾಜಿ ಭಾರತೀಯ ಕ್ರಿಕೆಟಿಗ ವಾಸಿಂ ಜಾಫರ್, ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಅವರನ್ನ ಹೊಗಳಿ ಬರೆದಿದ್ದಾರೆ, “ಈ ಇಬ್ಬರಿಗೆ ಯಾವುದೇ ಪ್ರಶಸ್ತಿ ನೀಡಿದರೂ ಕಡಿಮೆ. ಜೋ ರೂಟ್ ಪ್ರಸ್ತುತ ಟೆಸ್ಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್, ಜಾನಿ ಬೈರ್‌ಸ್ಟೋವ್ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ಸವಾಲನ್ನು ಸ್ವೀಕರಿಸಿದ ರೀತಿ ಇದು ಅದ್ಭುತವಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ಇದು ನೋಡಲು ಅದ್ಭುತವಾಗಿದೆ ಎಂದು ಇಂಗ್ಲೆಂಡ್‌ನ ಏಕದಿನ ಮತ್ತು ಟಿ20 ತಂಡದ ನೂತನ ನಾಯಕ ಜೋಸ್ ಬಟ್ಲರ್ ಬರೆದುಕೊಂಡಿದ್ದಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಅತ್ಯುತ್ತಮ ಬ್ಯಾಟಿಂಗ್‌ಗೆ ಉದಾಹರಣೆಯಾಗಿದೆ ಎಂದು ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೊಗಳಿದ್ದಾರೆ. ಅರ್ಧ ದಿನಕ್ಕಿಂತ ಹೆಚ್ಚು ಸಮಯದೊಂದಿಗೆ 378 ರನ್‌ಗಳನ್ನು ಬೆನ್ನಟ್ಟುವುದು ಅದ್ಭುತ ಎಂದು ಅಜರುದ್ದೀನ್ ಟ್ವೀಟ್ ಮಾಡಿದ್ದಾರೆ.