IND VS ENG | ಪಂತ್ ಸೆಂಚೂರಿ ಸಿಡಿಸಿದ್ರೆ ಟೀಂ ಇಂಡಿಯಾಗೆ ಸೋಲು ಕಟ್ಟಿಟ್ಟಬುತ್ತಿ..!
ಭಾರತ – ಇಂಗ್ಲೆಂಡ್ ತಂಡಗಳ ನಡುವೆ ಎಡ್ಜ್ ಬಾಸ್ಟನ್ ನಲ್ಲಿ ನಡೆಯುತ್ತಿರುವ ಅಂತಿಮ ಪಂದ್ಯ ರೋಚಕ ಘಟ್ಟ ತಲುಪಿದೆ.
ಪಂದ್ಯದ ಅಂತಿಮ ದಿನದಲ್ಲಿ ಟೀಂ ಇಂಡಿಯಾ ಗೆಲ್ಲಲು ಏಳು ವಿಕೆಟ್ ಬೇಕು, ಇಂಗ್ಲೆಂಡ್ ತಂಡದ ಗೆಲುವಿಗೆ 119 ರನ್ ಗಳ ಅವಶ್ಯಕತೆ ಇದೆ.
ಇದೀಗ ಟೀಂ ಇಂಡಿಯಾದ ಗೆಲುವು ಬೌಲರ್ ಗಳ ಮೇಲೆ ನಿಂತಿದೆ.
ಅಂತಿಮ ದಿನದಲ್ಲಿ ಬೌಲರ್ ಗಳು ಅಬ್ಬರಿಸುತ್ತಾರೆ ಎಂಬ ಆಶಾಭಾವನೆಯಲ್ಲಿದ್ದಾರೆ.
ಆದ್ರೆ ಒಂದು ವಿಷಯದ ಬಗ್ಗೆ ಟೀಂ ಇಂಡಿಯಾದ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಅದು ಏನಂದರೇ ವಿದೇಶದಲ್ಲಿ ರಿಷಬ್ ಪಂತ್ ಸೆಂಚೂರಿ ಸಿಡಿಸಿದ ಸಂದರ್ಭದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿರೋದು ತುಂಬಾ ಕಡಿಮೆ.
ಪ್ರಸ್ತುತ ಇದೇ ವಿಚಾರ ಟಾಕ್ ಆಫ್ ದಿ ಟೌನ್ ಆಗಿದೆ. ಪಂತ್ ತನ್ನ ಟೆಸ್ಟ್ ಕೆರಿಯರ್ ನಲ್ಲಿ ಐದು ಸೆಂಚೂರಿಗಳನ್ನು ಸಿಡಿಸಿದ್ದಾರೆ.

ಇದರಲ್ಲಿ ಐದು ಸೆಂಚೂರಿಗಳು ವಿದೇಶದಲ್ಲಿ ಬಂದಿವೆ.
ಈ ನಾಲ್ಕರಲ್ಲಿ ಪಂತ್ ಸಿಡ್ನಿಯಲ್ಲಿ ಸೆಂಚೂರಿ ಸಿಡಿಸಿದ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.
ಇನ್ನುಳಿದ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಇಂಗ್ಲೆಂಡ್ ವಿರುದ್ಧ ಸದ್ಯ ನಡೆಯುತ್ತಿರುವ ಪಂದ್ಯದ ಫಲಿತಾಂಶ ಏನಾಗಲಿದೆ..? ಎಂಬ ಆಂತಕ ಎಲ್ಲರಲ್ಲೂ ಮೂಡಿದೆ.
ಪಂತ್ ಸೆಂಚೂರಿಗಳ ವಿವರ
2018 ಇಂಡಿಯಾ ಟೂರ್ ಆಫ್ ದಿ ಇಂಗ್ಲೆಂಡ್ ಪಂತ್ 114 – ಟೀಂ ಇಂಡಿಯಾಗೆ ಸೋಲು
2019 ಇಂಡಿಯಾ ಟೂರ್ ಆಫ್ ದಿ ಆಸ್ಟ್ರೇಲಿಯಾ ಪಂತ್ 159 – ಮ್ಯಾಚ್ ಡ್ರಾ
2021 ಇಂಗ್ಲೆಂಡ್ ಟೂರ್ ಆಫ್ ಇಂಡಿಯಾ ಪಂತ್ 101 – ಭಾರತಕ್ಕೆ ಗೆಲುವು
2022 ಇಂಡಿಯಾ ಟೂರ್ ಆಫ್ ಸೌತ್ ಆಫ್ರಿಕಾ ಪಂತ್ 100 – ಟೀಂ ಇಂಡಿಯಾ ಸೋಲು
2022 ಇಂಡಿಯಾ ಟೂರ್ ಆಫ್ ಇಂಗ್ಲೆಂಡ್ ಐದನೇ ಟೆಸ್ಟ್ ಪಂದ್ಯ ಪಂತ್ 146 ರನ್ – ?