IND VS ENG : ಮೊದಲ ಟಿ 20ಗೆ ವಿವಿಎಸ್ ಲಕ್ಷ್ಮಣ್ ಕೋಚ್
ಸೌತಾಂಪ್ಟನ್ ವೇದಿಕೆಯಾಗಿ ಜುಲೈ ಏಳರಿಂದ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಪಂದ್ಯಕ್ಕೆ ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ಎನ್ ಸಿಎ ಡೈರೆಕ್ಟರ್ ವಿವಿಎಸ್ ಲಕ್ಷ್ಮಣ್ ವ್ಯವಹರಿಸಲಿದ್ದಾರೆ ಎಂದು ವರದಿಯಾಗಿದೆ.
ರಿ ಶೆಡ್ಯೂಲ್ಡ್ ಆಗಿರುವ ಟೆಸ್ಟ್ ಪಂದ್ಯ ಮುಗಿಯುವ ಎರಡು ದಿನಗಳ ಗ್ಯಾಪ್ ನಲ್ಲಿ ಮೊದಲ ಟಿ 20 ಪಂದ್ಯ ನಡೆಯಲಿದೆ.
ಹೀಗಾಗಿ ಈ ಪಂದ್ಯಕ್ಕೆ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ರೆಸ್ಟ್ ನೀಡಬೇಕು ಎಂದು ಬಿಸಿಸಿಐ ನಿರ್ಧಿರಿಸಿದೆ.
ಹೀಗಾಗಿ ಇಂಗ್ಲೆಂಡ್ – ಇಂಡಿಯಾ ನಡುವಿನ ಮೊದಲ ಟಿ 20 ಪಂದ್ಯಕ್ಕೆ ಲಕ್ಷ್ಮಣ್ ಕೋಚಿಂಗ್ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಸಾಧ್ಯತೆಗಳಿವೆ.
ಲಕ್ಷ್ಮಣ್ ಇತ್ತೀಚೆಗೆ ನಡೆದ ಐರ್ಲೆಂಡ್ ಪ್ರವಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾದ ಹೆಚ್ ಕೋಚ್ ಆಗಿ ವ್ಯವಹಾರಿಸಿದ್ದರು.
ಇದು ಹೀಗಿದ್ದರೇ ಇಂಗ್ಲೆಂಡ್ ನಡೆಯಲಿರುವ ಮೊದಲ ಟಿ 20 ಪಂದ್ಯದಿಂದ ಕೋಚ್ ಸಹಿತ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಜಸ್ಟ್ರೀತ್ ಬುಮ್ರಾ, ರವೀಂದ್ ಜಡೇಜಾ ಕೂಡ ದೂರ ಉಳಿಯಲಿದ್ದಾರೆ.
ರಾಹುಲ್ ಜೊತೆಗೆ ರೀ ಶೆಡ್ಯೂಲ್ಡ್ ಆಗಿದ್ದ ಟೆಸ್ಟ್ ಪಂದ್ಯದ ಭಾಗವಾಗಿರುವ ಇವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.