IND vs ENG: ಹಾರ್ದಿಕ್ ಪಾಂಡ್ಯಗಾಗಿ ರಿಷಬ್ ಪಂಥ್ ತ್ಯಾಗ… ಮೆಚ್ಚುಗೆಗೆ ಪಾತ್ರ…
2022 ರ ಟಿ 20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಇಂಗ್ಲೆಂಡ್ ಎದುರು 169 ರನ್ಗಳ ಗುರಿಯನ್ನು ನೀಡಿದೆ. ಭಾರತದ ಪರ ವಿರಾಟ್ ಕೊಹ್ಲಿ ನಾಲ್ಕನೇ ಅರ್ಧಶತಕ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 63 ರನ್ಗಳ ಬಿರುಸಿನ ಇನ್ನಿಂಗ್ಸ್ ನೊಂದಿಗೆ ತಂಡವನ್ನ ಉತ್ತಮ ಮೊತ್ತಕ್ಕೆ ಕೊಂಡೊಯ್ದರು.
ಟೀಂ ಇಂಡಿಯಾದ ಬ್ಯಾಟಿಂಗ್ ನಂತರ ಕೊಹ್ಲಿ, ಹಾರ್ದಿಕ್ ಬಿಟ್ಟರೆ ಮತ್ತೊಬ್ಬ ಆಟಗಾರನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಆಟಗಾರ ಬೇರೆ ಯಾರೂ ಅಲ್ಲ ರಿಷಬ್ ಪಂತ್. ಪಂತ್ 4 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿದರು, ಆದರೆ ತಂಡಕ್ಕೆ ತಮ್ಮ ವಿಕೆಟ್ ತ್ಯಾಗ ಮಾಡುವ ಮೂಲಕ ಅಭಿಮಾನಿಗಳ ಮೆಚ್ಚುಗೆ ಪಾತ್ರರಾಗಿದ್ದಾರೆ.
ಇನಿಂಗ್ಸ್ ನ 20 ನೇ ಓವರ್ನ ಮೂರನೇ ಬಾಲ್ ನಲ್ಲಿ ಪಂಥ್ ಬ್ಯಾಟಿಂಗ್ ಮಾಡುತ್ತಿದ್ದರು. ಬಾಲ್ ಬೀಟ್ ಆಗಿ ಕೀಪರ್ ಕೈ ಸೇರಿತು. ಹಾರ್ದಿಕ್ ಸ್ಟ್ರೈಕ್ ತೆಗೆದುಕೊಳ್ಳಲು ಓಡಿದರು. ಹಾರ್ದಿಕ್ ಅವರು ಉತ್ತಮ ಟಚ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕಾರಣ ಅವರನ್ನ ಹೇಗಾದರೂ ಸ್ಟ್ರೈಕ್ಗೆ ತರುವುದು ಅಗತ್ಯ ಎಂದು ಪಂತ್ ತಿಳಿದಿದ್ದರು, ಇದರಿಂದಾಗಿ ಪಂತ್ ಅವರ ವಿಕೆಟ್ ಅನ್ನು ಲೆಕ್ಕಿಸದೆ ಇಲ್ಲಿ ಕ್ರೀಸ್ ತೊರೆದರು. ಹಾರ್ದಿಕ್ ಇನ್ನೊಂದು ತುದಿಯನ್ನು ತಲುಪಿದರು, ಆದರೆ ಪಂತ್ ಅರ್ಧ ಕ್ರೀಸ್ ಅನ್ನು ಸಹ ದಾಟಲು ಸಾಧ್ಯವಾಗಲಿಲ್ಲ.
ಪಂತ್ ಅವರ ಈ ತ್ಯಾಗದಿಂದ ಟೀಮ್ ಇಂಡಿಯಾಗೂ ಸ್ವಲ್ಪ ಉಪಯೋಗವಾಯಿತು. ಹಾರ್ದಿಕ್ ಪಾಂಡ್ಯ ಜೋರ್ಡಾನ್ ಅವರ ಮುಂದಿನ ಎರಡು ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಸಹಿತ 10 ರನ್ ಗಳಿಸಿದರು. ಹಾರ್ದಿಕ್ ಕೊನೆಯ ಎಸೆತದಲ್ಲಿ ನಾಲ್ಕು ರನ್ ಗಳಿಸಿದ್ದರು, ಆದರೆ ಅವರು ಹಿಟ್ ವಿಕೆಟ್ಗೆ ಔಟಾದರು. ಹಾರ್ದಿಕ್ 33 ಎಸೆತಗಳಲ್ಲಿ 63 ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು.
IND vs ENG: Rishabh Panth’s sacrifice for Hardik Pandya… Appreciated…