ind-vs-eng | ದ್ವಿತೀಯ ಇನ್ನಿಂಗ್ಸ್ ನಲ್ಲಿ 245ಕ್ಕೆ ಟೀಂ ಇಂಡಿಯಾ ಆಲೌಟ್..!
ಇಂಗ್ಲೆಂಡ್ ವಿರುದ್ದದ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 245 ರನ್ ಗಳಿಗೆ ಆಲೌಟ್ ಆಗಿದೆ.
ಟೀಂ ಇಂಡಿಯಾ ಪರ ಆರಂಭಿಕ ಆಟಗಾರ ಚೇತೇಶ್ವರ್ ಪೂಜಾರ 66 ರನ್ ಗಳಿಸಿದ್ರೆ, ರಿಷಬ್ ಪಂತ್ 57 ರನ್ ಗಳಿಸಿ ಗರಿಷ್ಠ ಸ್ಕೋರರ್ಸ್ ಎನಿಸಿಕೊಂಡಿದ್ದಾರೆ.
ಮೂರು ವಿಕೆಟ್ ನಷ್ಟಕ್ಕೆ 125 ರನ್ ಗಳೊಂದಿಗೆ ಟೀಂ ಇಂಡಿಯಾ ನಾಲ್ಕನೇ ದಿನದಾಟ ಆರಂಭಿಸಿತು.
ಪೂಜಾರಾ 66 ರನ್ ಗಳಿಸಿ ಔಟ್ ಆದ್ರೆ ನಂತರ ಬಂದ ಶ್ರೇಯಸ್ ಅಯ್ಯರ್ 19 ರನ್ ಗಳಿಸಿದ್ರು.

ಮೊದಲ ಇನ್ನಿಂಗ್ಸ್ ಹೀರೋ ರಿಷಬ್ ಪಂತ್ 57 ರನ್ ಗಳಿಸಿ ಮತ್ತೆ ತಂಡಕ್ಕೆ ನೆರವಾದರು.
ರವೀಂದ್ರ ಜಡೇಜಾ 23 ರನ್, ಶರ್ಧೂಲ್ 4 ರನ್, ಶಮಿ 13ರನ್, ಬುಮ್ರಾ 7 ರನ್ ಗಳಿಸಿದರು.
ಪರಿಣಾಮ ಟೀಂ ಇಂಡಿಯಾ ದ್ವಿತೀಯ ಇನ್ನಿಂಗ್ಸ್ ನಲ್ಲಿ 245 ರನ್ ಗಳಿಗೆ ಸರ್ವಪತನಗೊಂಡಿದೆ.
ಇದರೊಂದಿಗೆ ಇಂಗ್ಲೆಂಡ್ ತಂಡಕ್ಕೆ ಪಂದ್ಯ ಗೆಲ್ಲಲು 378 ರನ್ ಗಳ ಗುರಿಯನ್ನ ನೀಡಿದೆ.