ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಭಾನುವಾರ ನಡೆಯಲಿದೆ.
ಕಟಕ್ ಪಿಚ್ ವರದಿ
ಈ ಪಂದ್ಯವು ಬಾರಾಬತಿ ಮೈದಾನದಲ್ಲಿ ನಡೆಯಲಿದೆ, ಇದು ಆರು ವರ್ಷಗಳ ಬಳಿಕ ನಡೆಯುತ್ತಿರುವ ಮೊದಲ ಏಕದಿನ ಪಂದ್ಯವಾಗಿದೆ. ಈ ಮೈದಾನದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು 2019ರಲ್ಲಿ ಮುಖಾಮುಖಿಯಾಗಿದ್ದವು. ಕಟಕ್‌ನಲ್ಲಿ ಭಾರತವು ಒಟ್ಟು 17 ಏಕದಿನ ಪಂದ್ಯಗಳನ್ನು ಆಡಿದ್ದು, 13 ಬಾರಿ ಗೆಲುವು ಸಾಧಿಸಿದೆ ಮತ್ತು ಕೇವಲ 4 ಬಾರಿ ಸೋಲು ಕಂಡಿದೆ. ಕಳೆದ 7 ಪಂದ್ಯಗಳಲ್ಲಿ ಭಾರತ ಒಂದೇ ಒಂದು ಸೋಲು ಕಂಡಿಲ್ಲ, ಇದು ಇಂಗ್ಲೆಂಡ್ನ ತಂಡಕ್ಕೆ ಚಿಂತೆಗೀಡಾಗಿದೆ.
ಮೈದಾನದ ದಾಖಲೆಯ ವಿವರ
ಭಾರತ-ಇಂಗ್ಲೆಂಡ್ ನಡುವಿನ ಈ ಮೈದಾನದಲ್ಲಿ ಒಟ್ಟು 5 ಏಕದಿನ ಪಂದ್ಯಗಳು ನಡೆದಿವೆ. ಭಾರತವು 3 ಪಂದ್ಯಗಳನ್ನು ಗೆದ್ದುಕೊಂಡರೆ, ಇಂಗ್ಲೆಂಡ್ 2 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಒಟ್ಟಾರೆ, ಭಾರತ ಮತ್ತು ಇಂಗ್ಲೆಂಡ್ ನಡುವೆ 108 ಏಕದಿನ ಪಂದ್ಯಗಳು ನಡೆದಿವೆ; ಇದರಲ್ಲಿ ಭಾರತ 59 ಗೆಲುವು ಗಳಿಸಿದ್ದು, ಇಂಗ್ಲೆಂಡ್ 44 ಗೆಲುವು ಗಳಿಸಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್. (ವಿಕೆಟ್ ಕೀಪರ್) ಮತ್ತು ರವೀಂದ್ರ ಜಡೇಜಾ.
ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೋ ರೂಟ್, ಜಾಕೋಬ್ ಬೆಥೆಲ್, ಲಿಯಾಮ್ ಲಿವಿಂಗ್‌ಸ್ಟೋನ್, ಬ್ರೈಡನ್ ಕಾರ್ಸೆ, ಜೇಮೀ ಓವರ್ಟನ್, ಜೋಸ್ ಬಟ್ಲರ್, ಜೇಮೀ ಸ್ಮಿತ್, ಫಿಲಿಪ್ ಸಾಲ್ಟ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಮಾರ್ಕ್ ವುಡ್.