IND vs ENG : ಆರಂಭಿಕರಾಗುತ್ತಾರಾ ವಿರಾಟ್ ಕೊಹ್ಲಿ ?
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ 20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಾರಾ ಅನ್ನೋ ಪ್ರಶ್ನೆ ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.
ಯಾಕಂದರೇ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸೌತಾಂಪ್ಟನ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 50 ರನ್ ಗಳ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಧೂಳೆಬ್ಬಿಸಿದೆ.
ಆದ್ರೆ ಇಂದಿನ ಪಂದ್ಯಕ್ಕೆ ಹಿರಿಯ ಆಟಗಾರರ ಲಭ್ಯತೆ ಇದೆ. ಹೀಗಾಗಿ ಯುವ ಆಟಗಾರರು ತಂಡದಿಂದ ಕೋಕ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಅರ್ಷದೀಪ್ ಸಿಂಗ್ ಎರಡು ಮತ್ತು ಮೂರನೇ ಟಿ 20 ಪಂದ್ಯಕ್ಕೆ ಆಯ್ಕೆ ಆಗಿಲ್ಲ. ಹೀಗಾಗಿ ಅವರ ಸ್ಥಾನದಲ್ಲಿ ಜಸ್ ಪ್ರೀತ್ ಬುಮ್ರಾ ನೇರವಾಗಿ ಕಣಕ್ಕಿಳಿಯುತ್ತಾರೆ.
ಇನ್ನು ಅಕ್ಷರ್ ಪಟೇಲ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಎಂಟ್ರಿ ಕೊಡಬಹುದು. ದಿನೇಶ್ ಕಾರ್ತಿಕ್ ಸ್ಥಾನದಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಅಖಾಡಕ್ಕಿಳಿಯಬಹುದು. ಆದ್ರೆ ಇಲ್ಲಿ ಪ್ರಶ್ನೆ ಇರೋದು ವಿರಾಟ್ ಕೊಹ್ಲಿಯ ಬಗ್ಗೆ..
ಯಾಕಂದರೇ ಮಿಡಲ್ ಆರ್ಡರ್ ನಲ್ಲಿ ಸದ್ಯ ಟೀಂ ಇಂಡಿಯಾ ಸಾಲಿಡ್ ಆಗಿದೆ.
ಯುವ ಬ್ಯಾಟರ್ ಗಳಾಗ ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ.
ಹೀಗಾಗಿ ಇವರಲ್ಲಿ ಯಾರು ವಿರಾಟ್ ಗೆ ಸ್ಥಾನ ಬಿಡುತ್ತಾರೆ ಅನ್ನೋ ಪ್ರಶ್ನೆ ಇದೆ.
ಹೀಗಾಗಿಯೇ ಇಂಗ್ಲೆಂಡ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಒಂದು ಸಲಹೆ ನೀಡಿದ್ದಾರೆ.
ಅದು ಏನಂದರೇ ಆರಂಭಿಕ ಇಶಾನ್ ಕಿಶನ್ ಬದಲು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಸಬೇಕಂತೆ.
ಮೊದಲ ಟಿ20ಯಲ್ಲಿ ಭಾರತದ ಎಲ್ಲಾ ಬ್ಯಾಟ್ಸ್ ಮನ್ ಗಳು ಉತ್ತಮ ಪ್ರದರ್ಶನ ನೀಡಿದರೂ ಆರಂಭಿಕ ಆಟಗಾರ ಇಶಾನ್ ಕಿಶನ್ ನಿರಾಸೆ ಮೂಡಿಸಿದರು.
![ind-vs-eng-Will Virat Kohli open saaksha tv](http://saakshatv.com/wp-content/uploads/2021/07/ishan-kishan-20-300x198.jpg)
ಕೇವಲ 8 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡಿದ್ದರು.
ಹೀಗಾಗಿ ಎಡ್ಜ್ಬಾಸ್ಟನ್ನಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಬದಲಿಗೆ ಕೊಹ್ಲಿ ಭಾರತದ ಪರ ಓಪನಿಂಗ್ ಮಾಡಬೇಕು ಎಂದು ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿಯಂತಹ ಆಟಗಾರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಾರದು. ಮೊದಲ ಟಿ20ಗೆ ವಿಶ್ರಾಂತಿ ಪಡೆದ ಕೊಹ್ಲಿ ಎರಡನೇ ಟಿ20ಗೆ ರೆಡಿಯಾಗಿದ್ದಾರೆ.
“ವಿರಾಟ್ ಅಂತಿಮ ತಂಡಕ್ಕೆ ಬಂದರೆ, ಕಿಶನ್ ಬದಲಿಗೆ ಅವರು ಓಪನ್ ಮಾಡಬೇಕು ಎಂದು ನಾನು ಭಾವಿಸುತ್ತೇನೆ.
ಕೊಹ್ಲಿಯಂತಹ ಶ್ರೇಷ್ಠ ಆಟಗಾರನನ್ನು ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಗೆ ಕಳುಹಿಸಬಾರದು.
ಕೊಹ್ಲಿ ಓಪನರ್ ಆಗಿ ಬರಬೇಕು. ಇನ್ನೊಂದು ತುದಿಯಲ್ಲಿ ರೋಹಿತ್ ಆಕ್ರಮಣಕಾರಿ ಆಟವಾಡಿದರೆ, ಕೊಹ್ಲಿ ಕೂಡ ಅದನ್ನೇ ಅನುಸರಿಸುತ್ತಾರೆ.
ಇಬ್ಬರೂ ದೊಡ್ಡ ಮೊತ್ತವನ್ನು ಗಳಿಸಿ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರೆ, ಹೂಡಾ ಮತ್ತು ಸೂರ್ಯ ಕುಮಾರ್ ಯಾದವ್ ಅವರ ಕೆಲಸವನ್ನು ಅವರು ಮಾಡುತ್ತಾರೆ ಎಂದು ಸ್ವಾನ್ ವಾದಿಸಿದ್ದಾರೆ.
ಅಂದಹಾಗೆ ಈ ಬಾರಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆರ್ ಸಿಬಿ ಪರ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದ್ದರು.