IND vs Newz : ಕಿವೀಸ್ ತಂಡ ಪ್ರಕಟ : ಸ್ಯಾಂಟ್ನರ್ ನಾಯಕ
ವೆಲ್ಲಿಂಗ್ಟನ್: ಮುಂಬರುವ ಭಾರತ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಿದೆ.
ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ ಅವರನ್ನು ತಂಡದ ನಾಯಕನನ್ನಾಗಿ ನೇಮಿಸಿದೆ.
ಮಿಚೆಲ್ ಸ್ಯಾಂಟ್ನರ್ 11 ಟಿ20 ಪಂದ್ಯಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಐರ್ಲೆಂಡ್ ವಿರುದ್ಧ 8, ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ ವಿರುದ್ಧ ನಾಯಕತ್ವ ವಹಿಸಿದ್ದಾರೆ.
ಅನುಭವಿ ಆಟಗಾರರಾದ ಕೇನ್ ವಿಲಿಯಮ್ಸನ್ ಮತ್ತು ಟಿಮ್ ಸೌಥಿಗೆ ವಿಶ್ರಾಂತಿ ನೀಡಲಾಗಿದೆ. ಯುವ ವೇಗಿ ಬೆನ್ ಲಿಸ್ಟರ್ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.ಏಕದಿನ ಕ್ರಿಕೆಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ನ್ಯೂಜಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೇನ್ ಕ್ಲೆವರ್, ಜಾಕೊಬ್ ಡಫಿ, ಲಾಕಿ ಫಗ್ರ್ಯೂಸನ್, ಬೆನ್ ಲಿಸ್ಟರ್ ಡ್ಯಾರಿಲ್ ಮಿಚೆಲ್, ಗ್ಲೇನ್ ಫಿಲೀಪ್ಸ್, ಮೈಕಲ್ ರಿಪೆಚಾಪ್ಮನ್, ಹೆನ್ರಿ ಶಿಪ್ಲೆ, ಇಶ್ ಸೋ, ಬ್ಲೇರ್ ಟಿಕ್ನರ್.
IND vs Newz , kiwis team announce