ಟೀಂ ಇಂಡಿಯಾದ ಓಪನರ್ಸ್‍ಗಿಂತ ಆ ಇಬ್ಬರು ಚೆನ್ನಾಗಿ ಆಡ್ತಾರೆ

1 min read
Aakash Chopra saaksha tv

ಟೀಂ ಇಂಡಿಯಾದ ಓಪನರ್ಸ್‍ಗಿಂತ ಆ ಇಬ್ಬರು ಚೆನ್ನಾಗಿ ಆಡ್ತಾರೆ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವೂ ಗುರುವಾರ ಕಾನ್ಪುರದಲ್ಲಿ ಆರಂಭವಾಗಲಿದೆ.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಪಂದ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಪೂಜಾರ ಮತ್ತು ರಹಾನೆ ಭಾರತದ ಆರಂಭಿಕರಿಗಿಂತ ಹೆಚ್ಚು ರನ್ ಗಳಿಸಲಿದ್ದಾರೆ ಎಂದು ಅವರು ಭವಿಷ್ಯ ನುಡಿದ್ದಾರೆ.

“ಪೂಜಾರ ಮತ್ತು ರಹಾನೆ ಒಟ್ಟಾಗಿ ಭಾರತದ ಆರಂಭಿಕರಿಗಿಂತ ಹೆಚ್ಚು ರನ್ ಗಳಿಸಲಿದ್ದಾರೆ. ಪೂಜಾರ ಕೂಡ ಒತ್ತಡದಲ್ಲಿದ್ದಾರೆ.

 Aakash Chopra saaksha tv

ಆದರೆ ಲೀಡ್ಸ್‍ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪೂಜಾರ ತಮ್ಮ ಫಾರ್ಮ್ ಅನ್ನು ಮರಳಿ ಪಡೆದ್ದಾರೆ.

ಇಬ್ಬರೂ ಆರಂಭಿಕರು ಹೊಸಬರು. ಅದೇ ರೀತಿ ನ್ಯೂಜಿಲೆಂಡ್ ಬ್ಯಾಟ್ಸ್‍ಮನ್‍ಗಳಾದ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಇಬ್ಬರೂ ಈ ಪಂದ್ಯದಲ್ಲಿ ಚೆನ್ನಾಗಿ ಆಡಲಿದ್ದಾರೆ.

ಈ ಪಂದ್ಯದಲ್ಲಿ ಇಬ್ಬರೂ 125ಕ್ಕೂ ರನ್ ಗಳಿಸಲಿದ್ದಾರೆ ಎಂದು ಚೋಪ್ರಾ ಭವಿಷ್ಯ ನುಡಿದಿದ್ದಾರೆ.

ಇನ್ನು ಭಾರತದ ಸ್ಪಿನ್ನರ್‍ಗಳ ಬಗ್ಗೆ ಹೇಳುವುದಾದರೆ, ಈ ಪಂದ್ಯದಲ್ಲಿ ಭಾರತ ಎಷ್ಟು ಸ್ಪಿನ್ನರ್‍ಗಳನ್ನು ಕಣಕ್ಕಿಳಿಸುತ್ತದೆ ಎಂಬುದು ನನಗೆ ತಿಳಿದಿಲ್ಲ.

ಆದರೆ ಈ ಪಂದ್ಯದಲ್ಲಿ ಸ್ಪಿನ್ನರ್‍ಗಳು ಹತ್ತಕ್ಕೂ ಹೆಚ್ಚು ವಿಕೆಟ್‍ಗಳನ್ನು ಕಬಳಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ.

ಅಂತೆಯೇ ಭಾರತ ಈ ಪಂದ್ಯವನ್ನು ಖಂಡಿತವಾಗಿ ಗೆಲ್ಲುತ್ತದೆ ಎಂದು ಆಕಾಶ್ ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd