IND vs NZ Series : ರೋಹಿತ್ ಶರ್ಮ ಬ್ಯಾಟ್ ಸದ್ದು ಜೋರಾಗ್ಬೇಕಿದೆ..!!
ಪ್ರಸಕ್ತ ವರ್ಷದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ ಮುಂದಿನ ಏಕದಿನ ವಿಶ್ವಕಪ್ ಟೂರ್ನಿಗಾಗಿ ಭರ್ಜರಿ ತಯಾರಿ ಆರಂಭಿಸಿದೆ. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಯುವ ಆಟಗಾರರು ಅತ್ಯುತ್ತಮ ಫಾರ್ಮ್‌ನಲ್ಲಿರುವುದು ತಂಡಕ್ಕೆ ಶುಭ ಸೂಚಕವಾಗಿದೆ.
ಆದರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಅವರಿಂದ ದೊಡ್ಡ ಇನ್ನಿಂಗ್ಸ್ ಬಾರದಿರುವುದು ಸ್ವಲ್ಪಮಟ್ಟಿನ ಚಿಂತೆಗೀಡು ಮಾಡಿದೆ. ಭಾರತ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾಗಿರುವ ರೋಹಿತ್ ಬ್ಯಾಟ್‌ನಿಂದ ರನ್ ಬರುತ್ತಿದ್ದರು, ಶತಕ ದಾಖಲಿಸುವಲ್ಲಿ ಎಡವುತ್ತಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ 2020ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಸೆಂಚುರಿ ಬಾರಿಸಿದ್ದ ಹಿಟ್ ಮ್ಯಾನ್, ನಂತರದಲ್ಲಿ ಶತಕದ ಸಂಭ್ರಮ ಕಂಡಿಲ್ಲ.
ಕಳೆದ ಎರಡು ವರ್ಷಗಳಲ್ಲಿ ಆಡಿರುವ ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮ ಉತ್ತಮ ಪ್ರದರ್ಶನ ನೀಡಿದ್ದು, ತಂಡಕ್ಕೆ ಅಲ್ಪ ರನ್‌ಗಳ ಕಾಣಿಕೆ ನೀಡುತ್ತಾ ಬಂದಿದ್ದಾರೆ. 2022ರಿಂದ ಈವರೆಗೂ ರೋಹಿತ್ ಶರ್ಮ ODI ಕ್ರಿಕೆಟ್‌ನಲ್ಲಿ ನಾಲ್ಕು ಅರ್ಧಶತಕಗಳನ್ನ ದಾಖಲಿಸಿದ್ದರು, ಶತಕವಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದಾರೆ. 2022ರಿಂದ ಈವರೆಗೂ ರೋಹಿತ್ ಶರ್ಮ 42.50ರ ಸರಾಸರಿಯಲ್ಲಿ ರನ್‌ಗಳಿಸಿದ್ದಾರೆ.
ಅರ್ಧಶತಕದ ಹೊರತಾಗಿಯೂ ರೋಹಿತ್ ತಮ್ಮ ಮೇಲಿನ ನಿರೀಕ್ಷೆಗೆ ತಕ್ಕಂತೆ ಆಡುತ್ತಾ ಬಂದಿದ್ದಾರೆ. ಭಾರತ ತಂಡದ ಆರಂಭಿಕ ಬ್ಯಾಟಿಂಗ್ ಶಕ್ತಿಯಾಗಿರುವ ರೋಹಿತ್ ಶರ್ಮ, ಮುಂದಿನ ವಿಶ್ವಕಪ್ ಆರಂಭದ ವೇಳೆಗೆ ದೊಡ್ಡ ಇನ್ನಿಂಗ್ಸ್ ಆಡುವ ಭರವಸೆ ಮೂಡಿಸಿದ್ದಾರೆ. ತಂಡದ ನಾಯಕನ ಜವಾಬ್ದಾರಿ ಸಹ ಹೊತ್ತಿರುವ ಹಿಟ್ ಮ್ಯಾನ್ ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆಯಂತೆ ಬ್ಯಾಟಿಂಗ್ ಲಯ ಕಂಡುಕೊಂಡಿದ್ದೇ ಆದಲ್ಲಿ, ಭಾರತ ಬಲಿಷ್ಠ ತಂಡವಾಗಿ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ಎಂಟ್ರಿಕೊಡಲಿದೆ.