Rajat Patidar | 2ನೇ ಪಂದ್ಯದಲ್ಲಿ ಆರ್ ಸಿಬಿ ಆಟಗಾರನಿಗೆ ಸಿಗುತ್ತಾ ಚಾನ್ಸ್ ?
ರಾಂಚಿ ವೇದಿಕೆಯಾಗಿ ಇಂದು ಭಾರತ – ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯ ನಡೆಯಲಿದೆ.
ಈ ಪಂದ್ಯದಲ್ಲಿ ಹೇಗಾದ್ರೂ ಮಾಡಿ ಗೆಲುವು ಸಾಧಿಸಲು ಉಭಯ ತಂಡಗಳು ಸಜ್ಜಾಗಿವೆ.
ಯಾಕೆಂದರೇ ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿದರೇ ಸರಣಿ ಕೈವಶವಾಗಲಿದೆ.
ಆ ಮೂಲಕ ಟೀ 20 ಸರಣಿಯಲ್ಲಾದ ಸೋಲಿನ ಸೇಡು ತೀರಿಸಿಕೊಳ್ಳಲಿದೆ.
ಇತ್ತ ಭಾರತಕ್ಕೆ ಸರಣಿಯನ್ನು ಜೀವಂತವಾಗಿ ಇರಿಸಿಕೊಳ್ಳಲು ಮಹತ್ವದ ಪಂದ್ಯವಾಗಿದೆ.
ಇಂದಿನ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಸಮ ಬಲ ಸಾಧಿಸಬೇಕು ಎಂಬ ಪ್ಲಾನ್ ನಲ್ಲಿ ಯಂಗ್ ಇಂಡಿಯಾ ಇದೆ.

ಹೀಗಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಮುಖ್ಯವಾಗಿ ಭಾರತ ಬ್ಯಾಟಿಂಗ್ ವಿಭಾಗದಲ್ಲಿ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷೆ ಮಾಡಲಾಗಿದೆ.
ರುತುರಾಜ್ ಗಾಯಕ್ವಾಡ್ ಬದಲಿಗೆ ರಜತ್ ಪಟಿದಾರ್ ತಂಡ ಸೇರುವ ಸಾಧ್ಯತೆಗಳಿವೆ.
ಲಕ್ನೋದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 42 ಎಸೆತಗಳನ್ನು ಎದುರಿಸಿದ ರುತುರಾಜ್ ಗಾಯಕ್ವಾಡ್ ಗಳಿಸಿದ್ದು ಮಾತ್ರ 19 ರನ್.
ಹೀಗಾಗಿ ರುತುರಾಜ್ ಬದಲಿಗೆ ಒಳ್ಳೆಯ ಟಚ್ ನಲ್ಲಿರುವ ಪಟಿದಾರ್ ಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದ ರಜತ್ ಪಟಿದಾರ್ ಅದ್ಭುತ ಆಟವನ್ನಾಡಿದ್ರು. ಕ್ವಾಲಿಫೇಯರ್ ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು.
ಭಾರತ ಸಂಭಾವ್ಯ ತಂಡ
ಶಿಖರ್ ಧವನ್, ಶುಭ್ ಮನ್ ಗಿಲ್, ರಜತ್ ಪಟಿದಾರ್, ಶ್ರೇಯಸ್ ಅಯ್ಯರ್, ಇಶಾನ್ ಕಿಶಾನ್, ಸಂಜು ಸ್ಯಾಮ್ ಸನ್, ಶರ್ದೂಲ್ ಠಾಕೂರ್, ಕುಲ್ ದೀಪ್ ಯಾದವ್, ರವಿ ಬಿಷ್ಣೋಯಿ, ಮೊಹ್ಮದ್ ಶಮಿ, ಅವೇಶ್ ಖಾನ್